ಮಂಗಳೂರು, ಆ 16 (DaijiworldNews/SM): ಡ್ರಗ್ ವ್ಯಸನಿಗಳಿಗೆ ಮಾನಸಿಕ ಅಸ್ವಸ್ಥ ಎನ್ನುವ ಸರ್ಟಿಪಿಕೇಟ್ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲು ತೊಡಕಾಗಿದೆ. ವೆನ್ಲಾಕ್ ಆಸ್ಪತ್ರೆಯವರು ಯಾವ ಆಧಾರದಲ್ಲಿ ಡ್ರಗ್ಸ್ ವ್ಯಸನಿಗಳಿಗೆ ಮಾನಸಿಕ ಅಸ್ವಸ್ಥರು ಎನ್ನುವ ಸರ್ಟಿಪಿಕೇಟ್ ನೀಡಿದ್ದಾರೆ ಎನ್ನುವ ಕುರಿತು ತನಿಖೆ ನಡೆಯಬೇಕು ಎಂದು ಬೆಂಗರೆ ನಾಗರಿಕ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಬೆಂಗ್ರೆಯನ್ನು ಮಾದಕ ದ್ರವ್ಯ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಆಗಸ್ಟ್ ೧೮ರಂದು ಮಂಗಳೂರು ಪೊಲೀಸ್ ಕಮೀಷನರ್ ಜತೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಮಿತಿ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾದಕ ಸೇವಿಸಿ ಅಶಾಂತಿ ನಿರ್ಮಾಣ ಮಾಡುವವರನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ಕುಟುಂಬಸ್ಥರು ಬಂದು ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಸರ್ಟಿಫಿಕೇಟ್ ನೀಡಿ ಅವರನ್ನು ಪೊಲೀಸರ ಕೈಯಿಂದ ಬಿಡಿಸಿಕೊಂಡು ತೆರಳುತ್ತಾರೆ. ಇಂತಹ ಘಟನೆಗಳಿಂದಾಗಿ ಪೊಲೀಸರಿಗೆ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅಪರಾಧ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.