ಬಂಟ್ವಾಳ, ಆ 16 (DaijiworldNews/SM) : ಬೈಕ್ ನಲ್ಲಿ ಬಂದ ಐದು ಮಂದಿ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಅಡ್ಡಗಟ್ಟಿ ಬ್ಯಾಟ್ ಹಾಗೂ ಹತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಆ. 16 ರಂದು ಪ್ರಕರಣ ದಾಖಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಪಾತೂರು ಗ್ರಾಮ ಮಂಜೇಶ್ವರ ನಿವಾಸಿಯೋರ್ವರು ಹಲ್ಲೆಯಾದ ಬಗ್ಗೆ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ವಿವಿಧ ಐಪಿಸಿ ಕಲಂ’ಗಳದಿ ಪ್ರಕರಣ ದಾಖಲಾಗಿದೆ.
ಅ.15 ರಂದು ಸಾಲೆತ್ತೂರಿನ ನಿವಾಸಿಯೋರ್ವರು ಸೇರಿದಂತೆ ಒಟ್ಟು ನಾಲ್ಕು ಮಂದಿ ವಿಟ್ಲ ಸಮೀಪದ ಮುಳಿಯ ಎಂಬಲ್ಲಿಂದ ಜಾನುವಾರುಗಳಗಳನ್ನು ಖರೀದಿ ಮಾಡಿದ್ದಾರೆ. ಬಳಿಕ ಅದನ್ನು ಗೂಡ್ಸ್ ವಾಹನದಲ್ಲಿ ತುಂಬಿಸಿಕೊಂಡು, ಕಜೆ ಎಂಬಲ್ಲಿಗೆ ಸಾಗಿಸಲು ಯತ್ನ ನಡೆಸಿದ್ದಾರೆ ಎಂದು ದೂರಲಾಗಿದೆ. ಆ. 16ರಂದು ಮುಂಜಾನೆ ಐವರ ತಂಡವೊಂದು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಮೂರು ಮೋಟಾರು ಸೈಕಲ್ ಮತ್ತು ಒಂದು ಕಲ್ಲನ್ನು ರಸ್ತೆಗೆ ಅಡ್ಡವಾಗಿಟ್ಟು ಅಕ್ರಮ ಕೂಟ ರಚಿಸಿ ಗೂಡ್ಸ್ ವಾಹನದಲ್ಲಿದ್ದ ನಾಲ್ಕು ಜನರನ್ನು ಎಳೆದು ಹಾಕಿ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲಿ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.