ಕಾರ್ಕಳ ,ಆ 16 (DaijiworldNews/AK): ಕುಕ್ಕುಂದೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಉಷಾ ಮೋಹನ್ ಮತ್ತು ಉಪಾಧ್ಯಕ್ಷರಾಗಿ ಶಶಿಕಲಾ ಸಂತೋಷ್ ಆಯ್ಕೆಯಾಗಿದ್ದಾರೆ.
ಈ ಮೂಲಕ ತಾಲೂಕು ಕೇಂದ್ರ ಬಿಂದು ಎಂದು ಕರೆಯಲಾಗುವ ಕುಕ್ಕುಂದೂರು ಗ್ರಾಮ ಪಂಚಾಯತ್ ನಲ್ಲಿ ರಾಜಕೀಯ ಲೆಕ್ಕಚಾರಗಳೆಲ್ಲವೂ ಉಲ್ಟ-ಪಲ್ಟವಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಬಿಜೆಪಿ ಬೆಂಬಲಿತರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶೋಭಾ, ಉಪಾಧ್ಯಕ್ಷ ಸ್ಥಾನಕ್ಕೆ ನಿಶಾ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.ಇತ್ತ ಕಾಂಗ್ರೆಸ್ ಬೆಂಬಲಿತರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉಷಾ ಮೋಹನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಸಂತೋಷ್ ನಾಮಪತ್ರ ಸಲ್ಲಿಸಿದ್ದರು.
ಆದರೆ ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಇಬ್ಬರಿಗೆ ತಲಾ 16 ಮತ ಲಭಿಸಿತು.ಈ ಹಿನ್ನಲೆ ಪರ್ಯಾಯ ವ್ಯವಸ್ಥೆಯಾಗಿ "ಅದೃಷ್ಡ ಚೀಟಿ" ತೆಗೆಯಲಾಯಿತು. ಅದರಲ್ಲಿ ಕಾಂಗ್ರೆಸ್ ಪಾಲಿಗೆ ಅದೃಷ್ಡ ಒಲಿದು ಬಂದ ಹಿನ್ನಲೆ ಉಷಾ ಮೋಹನ್ ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ನಿಶಾ ಪ್ರಕಾಶ್ ಎದುರು ಮೂರು ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಸಂತೋಷ್ ಆಯ್ಕೆ ಆಗಿದ್ದಾರೆ.
ಪ್ರಥಮ ಅವಧಿಯಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಹಿಡಿತದಲ್ಲಿ ಇತ್ತು.ಆದರೆ ಎರಡನೇಯ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿಗರು ಅಧಿಕಾರಕ್ಕೇರಿರುವುದು ರಾಜಕೀಯದಲ್ಲಿ ಹೊಸ ಸಂಚಾಲವನ್ನ ಊಂಟು ಮಾಡಿದೆ. ಮೀಸಲಾತಿ
ನಿಗದಿ ಪಡಿಸಿದ ಪ್ರಕ್ರಿಯೆಯಂತೆ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ನೀಡಲಾಗಿದೆ.