ಬೆಳ್ತಂಗಡಿ, ಎ09(SS): ಧರ್ಮಗಳ ನಡುವೆ ವೈಷಮ್ಯ ಬೆಳೆಸಿ ರಾಜಕೀಯ ಬೆಳೆಸಬಾರದು. ಎಲ್ಲ ಜಾತಿ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆಸುವ ನಾವು ನೈಜ ಹಿಂದುತ್ವದ ಸಿದ್ಧಾಂತ ಅನುಸರಿಸುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ತನ್ನ ರಾಜಕೀಯ ಸಿದ್ಧಾಂತ ಸ್ಪಷ್ಟವಾಗಿದೆ. ಧರ್ಮಗಳ ನಡುವೆ ವೈಷಮ್ಯ ಬೆಳೆಸಿ ರಾಜಕೀಯ ಬೆಳೆಸಬಾರದು. ಎಲ್ಲರಿಗೂ ಸಮಪಾಲು ಸಹಬಾಳ್ವೆಯಾಗಿ ಎಲ್ಲ ಜಾತಿ ಧರ್ಮದವರನ್ನು ಗೌರವಿಸಿ ಒಟ್ಟಿಗೆ ಮುನ್ನಡೆಸುವುದೇ ನಿಜವಾದ ಹಿಂದೂ ಧರ್ಮ. ಧರ್ಮಗಳ ನಡುವೆ ವೈಷಮ್ಯ ಬೆಳೆಸಿ ರಾಜಕೀಯ ನಡೆಸುವುದಲ್ಲ ಎಂದು ಕಿವಿಮಾತು ಹೇಳಿದರು.
ಎಲ್ಲ ಜಾತಿ ಧರ್ಮದವರನ್ನು ಗೌರವಿಸಬೇಕು. ಒಂದೇ ಎನ್ನು ಭಾವನೆಯಲ್ಲಿ ಜೀವಿಸಬೇಕು. ನೈಜ ಹಿಂದುತ್ವದ ಸಿದ್ಧಾಂತ ಅನುಸರಿಸಬೇಕು. ನಾವು ಎಲ್ಲ ಜಾತಿ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆಸುವ ನಾವು ನೈಜ ಹಿಂದುತ್ವದ ಸಿದ್ಧಾಂತ ಅನುಸರಿಸುತ್ತಿದ್ದೇವೆ ಎಂದು ಹೇಳಿದರು.