ಮೂಡುಬಿದಿರೆ, ಆ 16 (DaijiworldNews/MS): ಇರುವೈಲು ಗ್ರಾಮ ಪಂಚಾಯತ್ನ ನೂತನ ಕಟ್ಟಡದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಯಾಗಿದೆ ಎಂಬ ಆರೋಪಕ್ಕೊಳಗಾಗಿ ಅಮಾನತು ಗೊಂಡಿದ್ದ ಮೂಡುಬಿದಿರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ದಯಾವತಿ ಮತ್ತು ಇರುವೈಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಅವರ ಅಮಾನತು ಆದೇಶ ರದ್ದುಪಡಿಸಲಾಗಿದೆ.
ಈ ಅಮಾನತು ಪ್ರಕರಣದಿಂದಾಗಿ ನಮ್ಮ ಹಕ್ಕು ಚ್ಯುತಿಯಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಶಾಸಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.ಬಿಜೆಪಿ ಶಾಸಕರ ಮಾತು ಕೇಳಿದರೆ ಅಮಾನತು ಶಿಕ್ಷೆಗೆಗುರಿಪಡಿಸಲಾಗುತ್ತದೆ ಎಂಬ ಸಂದೇಶ ನೀಡುವ ಸಲುವಾಗಿಯೇ ಜಿಲ್ಲಾಡಳಿತ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಚುನಾಯಿತ ಪ್ರತಿನಿಧಿಗಳಿಗೆ ಬೆಲೆ ಇಲ್ಲದಂತಾಗಿದೆ. ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮಾತಿಗೆ ಮಾತ್ರ ಗೌರವ ನೀಡುತ್ತಿದ್ದಾರೆ’ ಎಂದು ಶಾಸಕರು ಆರೋಪಿಸಿದ್ದರು. ಜಿಲ್ಲಾಧಿಕಾರಿ ಆಶ್ವಾಸನೆ ಬಳಿಕ ಪ್ರತಿಭಟನೆ ಹಿಂಪಡೆದಿದ್ದರು.
ಅಮಾನತು ಹಿಂಪಡೆದ ಸರಕಾರ ಈ ಇಬ್ಬರಿಗೆ ಮುಂದಿನ ಕರ್ತವ್ಯದ ನೆಲೆ ಎಲ್ಲಿ ಎಂಬುದನ್ನು ಸೂಚಿಸಿಲ್ಲ ಎಂದು ತಿಳಿದುಬಂದಿದೆ.