ಉಡುಪಿ, ಎ09(SS): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ತಯಾರಿಸಿರಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕ್ ಹೆಣ ಲೆಕ್ಕ ಹಾಕುತ್ತಿದ್ದರೆ ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಸಾಕ್ಷ್ಯ ಕೇಳುತ್ತಿವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪಾಕಿಸ್ತಾನ ಪ್ರಧಾನಿ ಅಥವಾ ಭಯೋತ್ಪಾದಕರೇ ರಚಿಸಿಕೊಟ್ಟಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದ್ದಾರೆ.
ದೇಶದ್ರೋಹ ಕಲಂ ತೆಗೆದು ಹಾಕುವ ಕಾಂಗ್ರೆಸ್ ಭರವಸೆ ಜಾರಿಯಾದರೆ ಈ ನೆಲದಲ್ಲಿ ಪಾಕ್ ಧ್ವಜ ಹಾರಿಸುವುದು, ಜಿಂದಾಬಾದ್ ಕೂಗಿದರೂ ದೇಶದ್ರೇಹವಾಗದು. ಹೀಗಾದರೆ ದೇಶದ ಅಖಂಡತೆ ಉಳಿಯದು ಎಂದು ಕಿಡಿ ಕಾರಿದರು.
ಸುಮಾರು 5 ವರುಷಗಳ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ಸಹಿತ ಆಸ್ಕರ್ಗೆ ಐದು ಬಾರಿ ಗೆಲುವು ತಂದಿತ್ತ ಕಾಂಗ್ರೆಸ್, ಬಿಜೆಪಿಗೆ ಸರಿಸಮಾನ ಹೋರಾಟ ನೀಡುತ್ತಿತ್ತು. ಈ ಬಾರಿ ಯಾವ ಮುಖ ಹೊತ್ತು ಜೆಡಿಎಸ್ಗೆ ಓಟು ಕೇಳುವುದೆನ್ನುವ ಕಾಂಗ್ರೆಸ್ ಹಿರಿಯ ನಾಯಕರ ಪ್ರಶ್ನೆ ವೇದನೆ ತಂದಿದೆ ಎಂದು ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆಗಾಗಿ ಪಕ್ಷೇತರ ಅಭ್ಯರ್ಥಿಯನ್ನು ಕಾಂಗ್ರೆಸ್ನಿಂದ ಅಮಾನತು ಮಾಡಿದೆ. ಕಾಂಗ್ರೆಸ್ನಿಂದ ಜೆಡಿಎಸ್ಗೆ ಪಕ್ಷಾಂತರ ಮಾಡಿದ ಪ್ರಮೋದ್ ವಿರುದ್ಧ ಮೈತ್ರಿ ನೆಪದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
2014ರಲ್ಲಿ 1.81 ಲಕ್ಷ ಮತಗಳ ಅಂತರದಿಂದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಗೆದ್ದರೆ, ಈ ಬಾರಿ 3ರಿಂದ 3.50 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವಷ್ಟು ಪಕ್ಷ ಸಂಘಟನೆ, ಹಿರಿಯರ ಆಶೀರ್ವಾದ, ಮೋದಿ ಅಲೆಯಿದೆ. ಮೊದಲ ಹಂತದಲ್ಲಿ ಪ್ರತಿ ಬೂತ್ನಲ್ಲಿ 45ರಿಂದ 60 ಪ್ರಬುದ್ಧ ಕಾರ್ಯಕರ್ತರಿಂದ ಮನೆ ಮನೆ ಮತಯಾಚನೆ ಶೇ.85ರಿಂದ 90ರಷ್ಟು ಪೂರ್ಣವಾಗಿದೆ ಎಂದು ತಿಳಿಸಿದರು.