ಮಂಗಳೂರು, ಆ 15 (DaijiworldNews/HR): ನ್ಯೂರೋ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿನ ಫಸ್ಟ್ ನ್ಯೂರೋ ಬ್ರೇನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಸಿಮೆನ್ಸ್ ಮ್ಯಾಗ್ನಟೋಮ್ ಕೃತಕ ಬುದ್ದಿಮತ್ತೆ ತಂತ್ರಜ್ಞಾನಗಳನು ಒಳಗೊಂಡ ಬರೊಮೆಟ್ರಿಕ್ಸ್ ಟೆಕ್ನಾಲಜಿ ಎಂಆರ್ಐ ವ್ಯವಸ್ಥೆಯನ್ನು ಸ್ಥಾಪಿಸಿದ್ದು, ಆ. 15ರಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿರಾದ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಈ ವ್ಯವಸ್ಥೆಯನ್ನು ಹೊಂದಿರುವ ದೇಶದ ಎರಡನೇ ಆಸ್ಪತ್ರೆ ಎಂಬ ಖ್ಯಾತಿಗೆ ಮಂಗಳೂರಿನ ಫಸ್ಟ್ ನ್ಯೂರೋ ಪಾತ್ರವಾಗಿದ್ದು, ನಮ್ಮ ನರರೋಗಶಾಸ್ತ್ರಜ್ಞರಿಗೆ ಅತ್ಯುನ್ನತ ಗುಣಮಟ್ಟದ ಮೆದುಳಿನ ಚಿತ್ರಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ವಿವರವಾದ ಚಿತ್ರಗಳು ರೋಗಿಯ ಸ್ಥಿತಿಯ ಬಗ್ಗೆ ನಿರ್ಣಾಯಕ ಚಿಕಿತ್ಸಾ ತೀರ್ಮಾನ ತೆಗೆದುಕೊಳ್ಳಲು ಸಹಾಯಕವಾಗುತ್ತದೆ.
ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕ ಶ್ರೀ ಡಿ.ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಚಂದ್ರಾವತಿ ಭಾಗವಹಿಸಿದರು. ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಹಾಗೂ ನಗರದ ಪ್ರಖ್ಯಾತ ನರರೋಗ ತಜ್ಞರಾದ ಡಾ.ರಾಜೇಶ್ ಶೆಟ್ಟಿ, ನಿರ್ದೇಶಕರಾದ ಶ್ರೀಮತಿ ರೋಶ್ನಿ ರಾಜೇಶ್ ಶೆಟ್ಟಿ, ಶ್ರೀ ರಾಮಚಂದ್ರಶೆಟ್ಟಿ,ಆಡಳಿತಾಧಿಕಾರಿ ಶ್ರೀ ರಂಜಿತ್ ಶೆಟ್ಟಿ ಹಾಗೂ ಫಸ್ಟ್ ನ್ಯೂರೋ ಆಸ್ಪತ್ರೆಯ ಎಲ್ಲಾ ವೈದ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನರರೋಗ ಚಿಕಿತ್ಸೆಗೆ ಮೀಸಲಾದ ಈ ಆಸ್ಪತ್ರೆಯಲ್ಲಿ ಮೆದುಳು ಮತ್ತು ಬೆನ್ನುಮೂಳೆಯ ಸಂಬಂಧಿತ ಸಮಸ್ಯೆಗಳಿಗೆ ವಿಶೇಷವಾಗಿ ಚಿಕಿತ್ಸೆ ನೀಡುವ ವೃತ್ತಿಪರ ತಂಡವು ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಮತ್ತು ಗುಣಮಟ್ಟದ ಸೇವೆಯನ್ನು ನೀಡುತ್ತಿದೆ. ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು, ಆ ಮೂಲಕ ರೋಗ ನಿರ್ಣಯ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
1. ಕೃತಕ ಬುದ್ದಿಮತ್ತೆಯಿಂದ ಕೂಡಿದ ಬಯೋಮ್ಯಾಟ್ರಿಕ್ಸ್ ತಂತ್ರಜ್ಞಾನವು ರೋಗಿಗಳಿಗೆ ಹಿತವಾದ ಸ್ಕ್ಯಾನಿಂಗ್ ಅನುಭವ ನೀಡಿಲಿದ್ದು, ಉನ್ನತ ಸೌಕರ್ಯದಿಂದ ಕೂಡಿದೆ. ಇದರಿಂದಾಗಿ ಸ್ಕ್ಯಾನಿಂಗ್ನ ಫಲಿತಾಂಶ ಉತ್ತಮವಾಗಿ ಮೂಡಿಬರಲಿದೆ.
2. ಉತ್ತಮ ಚಿತ್ರ ಗುಣಮಟ್ಟ ಮೂಡಿಬರಲಿದೆ
3. ಸ್ಕ್ಯಾನಿಂಗ್ನ ಕಡಿಮೆ ಅವಧಿ. ಮೆದುಳಿನ ಸ್ಕ್ಯಾನ್ ೫ ನಿಮಿಷದಲ್ಲಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ತ್ವರಿತವಾಗಿ ಚಿಕಿತ್ಸೆ ನೀಡಲು ಸಾಧ್ಯವಿದೆ.
4. ಸ್ಕ್ಯಾನಿಂಗ್ ಮಾಡುವ ಶಬ್ದ ಇರುವುದಿಲ್ಲ. ಇದರಿಂದಾಗಿ ರೋಗಿಗಳಿಗೆ ಹೆದರಿಕೆ, ಆತಂಕ ಕಡಿಮೆಯಾಗುತ್ತದೆ. (೯೭% ಶಬ್ದ ಕಡಿತ)
ಸೇವಾ ಸೌಲಭ್ಯಗಳು
• ಸ್ಟ್ರೋಕ್ ಚಿಕಿತ್ಸೆ ಮತ್ತು ಸ್ಟ್ರೋಕ್ ನಿರ್ವಹಣೆ
• ಫಿಟ್ಸ್ (ಅಪಸ್ಮಾರ) ಚಿಕಿತ್ಸೆ
• ನರ ಸೋಂಕು (ನ್ಯೂರೋ ಇನ್ಫೆಕ್ಷನ್)
• ಮಕ್ಕಳ ನರ ರೋಗ ವಿಭಾಗ
• ನರ, ಮೆದುಳು ಮತ್ತು ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆ
• ತಲೆ ನೋವು/ವರ್ಟಿಗೋ ಚಿಕಿತ್ಸಾಲಯ
• ಪಾರ್ಕಿನ್ಸನ್ ಕಾಯಿಲೆ & ಚಲನೆಯ ಅಸ್ವಸ್ಥತೆ
• ಮೆಮೊರಿ ಕ್ಲಿನಿಕ್
• ನರಗಳನ್ನು ಮತ್ತೆ ಸುವ್ಯವಸ್ಥೆಗೆ ತರುವ ವಿಭಾಗ (ನ್ಯೂರೋ ರೀಹ್ಯಾಬಿಲಿಟೇಶನ್)
• ಸೈಕಿಯಾಟ್ರಿ (ಮನೋವೈದ್ಯಶಾಸ್ತ್ರ)
• ನ್ಯೂರೋ ರೆಡಿಯಾಲಾಜಿ & ನ್ಯೂರೋ ಇಂಟರ್ ವೆನ್ಷನ್
• ತೀವ್ರ ನಿಗಾ ಘಟಕ (ನ್ಯೂರೋ ಕ್ರಿಟಿಕಲ್ ಕೇರ್)
• ನ್ಯೂರೋ ಪೆಥಲಾಜಿ ಲ್ಯಾಬೋರೇಟರಿ
• 24x7 ತುರ್ತು ಚಿಕಿತ್ಸೆ
ಸಂಕೀರ್ಣ ನರವೈಜ್ಞಾನಿಕ ರೋಗನಿರ್ಣಯ ಮತ್ತು ಅವುಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವನ್ನು ಆಸ್ಪತ್ರೆಯು ಹೊಂದಿದೆ. ವಿಕಿರಣಶಾಸ್ತ್ರ ಮತ್ತು ನರವಿಜ್ಞಾನದ ಪರಿಣತಿಯನ್ನು ಸಂಯೋಜನೆಯೊಂದಿಗೆ, ಸುಧಾರಿತ ಇಮೇಜಿಂಗ್ ತಂತ್ರಜ್ಞಾನ, ನರ ಸಂಬಂದಿತ ಅಸ್ವಸ್ಥತೆಗಳಿಗೆ ನಿಖರವಾದ, ಉದ್ದೇಶಿತ ಚಿಕಿತ್ಸೆಗಳನ್ನು ನೀಡುವ
ಇಂಟರ್ವೆನ್ಷನಲ್ ನ್ಯೂರೋರಾಡಿಯಾಲಜಿ ಘಟಕ ಹೊಂದಿದೆ.