ಮಂಗಳೂರು, ಆ 13 (DaijiworldNews/AK):ಬೆಂಗಳೂರಿನಿಂದ ಅರಕಲಗೂಡು ಶನಿವಾರ ಸಂತೆ ಕುಕ್ಕೆ ಸುಬ್ರಮಣ್ಯ ಮಾರ್ಗವಾಗಿ ಮಂಗಳೂರು ತೆರಳುವ ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷದಿಂದ ಹೊಂಡಕ್ಕೆ ಬಿದ್ದ ಘಟನೆ ಬಿಸಿಲೆ ಘಾಟ್ ಮಾರ್ಗ ಮಧ್ಯೆ ಗಡಿ ಚೌಡೇಶ್ವರಿ ಅಮ್ಮ ದೇವಾಲಯದ ಹತ್ತಿರ ನಡೆದಿದೆ.
ಬೆಂಗಳೂರಿನಿಂದ ಅರಕಲಗೂಡು ಶನಿವಾರ ಸಂತೆ ಕುಕ್ಕೆ ಸುಬ್ರಮಣ್ಯ ಮಾರ್ಗವಾಗಿ ಮಂಗಳೂರು ತೆರಳುವ ಕೆಎಸ್ಆರ್ಟಿಸಿ ಬಸ್ ಮುಂಜಾನೆ ಸುಮಾರು 4.45 ರಾ ಹೊತ್ತಿಗೆ ಬಿಸಿಲೆ ಘಾಟ್ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಮಾರ್ಗ ಮಧ್ಯೆ ಗಡಿ ಚೌಡೇಶ್ವರಿಅಮ್ಮ ದೇವಾಲಯದ ಹತ್ತಿರ ಚಾಲಕನ ನಿರ್ಲಕ್ಷತೆಯಿಂದ ರಸ್ತೆಯ ಬದಿ ಆಳವಾದ ಹೊಂಡಕ್ಕೆ ಬಿದ್ದಿದೆ.
ಆದರೆ ಬಸ್ ಹೊಂಡಕ್ಕೆ ಬಿದ್ದು, ಮಧ್ಯಾಹ್ನ ಒಂದು ಗಂಟೆಯಾದರೂ ಹೊಂಡಕ್ಕೆ ಬಿದ್ದ ಬಸ್ನ್ನು ಮೇಲೆತ್ತಲೂ ಕ್ರೇನ್ ವ್ಯವಸ್ಥೆಯಾಗಲಿ, ಬಸ್ನಲ್ಲಿದ್ದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆಯನ್ನು ಮಾಡದೆ ಪ್ರಯಾಣಿಕರು ಪರದಾಡಿದರು. ಅಲ್ಲದೇ ಘಟನೆ ನಡೆದ ಬಳಿಕ ಬಸ್ ಚಾಲಕರಾಗಲಿ, ಸಂಬಂದಪಟ್ಟ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂದು ಪ್ರಯಾಣಿಕರು ಕಿಡಿಕಾರಿದರು.
ಬಸ್ ನಲ್ಲಿ ತುರ್ತು ಚಿಕಿತ್ಸೆಗೆಂದು ಮಂಗಳೂರಿಗೆ ತೆರಳುವ ಪ್ರಯಾಣಿಕರು, ಪುಟ್ಟ ಮಕ್ಕಳಿದ್ದರು ಬಸ್ ಚಾಲಕ , ನಿರ್ವಾಹಕರು ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಪ್ರಯಾಣಿಕರು ಮಾಧ್ಯಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.