ಮಂಗಳೂರು, ಆ 12 (DaijiworldNews/HR): ಕೊಂಕಣಿ ಬರಹಗಾರರ ಸಂಘ ‘ದಾಯ್ಜಿ ರೈಟರ್ಸ್ ಫೋರಂ' ಇದರ ಮಂಗಳೂರು ಘಟಕದ ಸಂಚಾಲಕರಾಗಿ ಪ್ರವೀಣ್ ತಾವ್ರೊ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ದಾಯ್ಜಿ ಟ್ರಸ್ಟ್ ಸದಸ್ಯರ ವಾರ್ಶಿಕ ಸಭೆಯಲ್ಲಿ ಸಭೆಯಲ್ಲಿ ಪ್ರವೀಣ್ ತಾವ್ರೊ ಅವರ ಹೆಸರನ್ನು ದಾಯ್ಜಿ ಸ್ಥಾಪಕ ಸದಸ್ಯ, ಸಾಹಿತಿ ಮೆಲ್ವಿನ್ ರೊಡ್ರಿಗಸ್ ಅವರು ಪ್ರಸ್ತಾಪಿಸಿದರೆ, ಪತ್ರಕರ್ತ, ದಾಯ್ಜಿ ದುಬಾಯ್ ಇದರ ಮಾಜಿ ಸಂಚಾಲಕ ಹೇಮಾಚಾರ್ಯ ಅನುಮೋದಿಸಿದರು. ದಾಯ್ಜಿ ಸಂಘಟನೆಯ ಇನ್ನೋರ್ವ ಸ್ಥಾಪಕ ಸದಸ್ಯರಾದ ವಾಲ್ಟರ್ ನಂದಳಿಕೆ ಉಪಸ್ಥಿತರಿದ್ದರು.
ಈ ಸಂದರ್ಭ ಹಿರಿಯ ಬರಹಗಾರ ಮತ್ತು ಯುಎಇಯ ದಾಯ್ಜಿ ದುಬೈ ಬರಹಗಾರರ ವೇದಿಕೆಯ ಮಾಜಿ ಸಂಚಾಲಕ ರೊನಾಲ್ಡ್ ನಜರತ್ ಅವರನ್ನು ಆಡಳಿತ ಮಂಡಳಿಗೆ ಸೇರ್ಪಡೆಗೊಳಿಸಲಾಯಿತು. ಸಭೆಗೆ ಚಾಲನೆ ನೀಡಿದ ಹೇಮಾಚಾರ್ಯ ಅವರು ಸಂಚಾಲಕರಾಗಿ ವಿನ್ಸೆಂಟ್ ಪಿಂಟೋ ಅವರ ಕೊಡುಗೆಯನ್ನು ಸ್ಮರಿಸಿ ಸರ್ವ ಸದಸ್ಯರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಯುವ ಬರಹಗಾರ, ನಿರ್ದೇಶಕ ಸ್ಟ್ಯಾನಿ ಬೇಳ, ಮತ್ತಿತರರು ಉಪಸ್ಥಿತರಿದ್ದರು.