ಉಪ್ಪಿನಂಗಡಿ, ಆ 12 (DaijiworldNews/MS): ಅಡಿಕೆ ಅಂಗಡಿಯಲ್ಲಿ ಅಡಿಕೆ ಮಾರಾಟ ಮಾಡಿ ಹಣದೊಂದಿಗೆ ಹಿಂತಿರುತ್ತಿದ್ದ ವ್ಯಕ್ತಿಯೊಬ್ಬರಿಗೆ ವೇಳೆ ಬೈಕಿನಲ್ಲಿ ಬಂದ ಯುವಕ ಯಾಮಾರಿಸಿದ ಹಣ ದೋಚಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಪದ್ಮುಂಜದ ಸಮೀಪದ ಉಳಿಯ ನಿವಾಸಿ 65 ವರ್ಷ ಪ್ರಾಯದ ದೇವಪ್ಪ ಗೌಡ ಅವರು ವಂಚನೆಗೆ ಒಳಗಾದವರು.
ನಾನು ನಿಮ್ಮ ಮಗಳ ಸಹಪಾಠಿ ಮೋಹನ್, ಕೆನರಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿ ಮೋದಿಯವರು ಕೊರೊನಾ ಸಮಯದಲ್ಲಿ ಕಳಿಸಿಕೊಟ್ಟ ಹಣ ಬ್ಯಾಂಕಿನಲ್ಲಿ ಕೊಳೆಯುತ್ತಿದೆ. ಅದನ್ನು ನಿಮ್ಮ ಖಾತೆಗೆ ವರ್ಗಾಯಿಸುವ. ಅದಕ್ಕೆ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಜೆರಾಕ್ಸ್ ತರಲು ಹೇಳಿ ಮುಂಗಡ 7 ಸಾವಿರ ರೂ. ಪಡೆದಿದ್ದರು. ಜೆರಾಕ್ಸ್ ಪ್ರತಿಯೊಂದಿಗೆ ಹಿಂದಿರುಗಿದಾಗ ಬೈಕಿನೊಂದಿಗೆ ಯುವಕನೂ ನಾಪತ್ತೆಯಾಗಿದ್ದ. ಬಹಳಷ್ಟು ಹೊತ್ತು ಆತನಿಗಾಗಿ ಕಾದು ಕಾದು ಬಸವಳಿದಾಗ ತಾನು ಮೋಸ ಹೋಗಿರುವ ಬಗ್ಗೆ ಗೊತ್ತಾಗಿತ್ತು. ಕಂಗೆಟ್ಟು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪೇಟೆಯೊಳಗಿನ ಸಿಸಿ ಕೆಮರಾದಲ್ಲಿನ ದೃಶ್ಯಾವಳಿಯ ಮೂಲಕ ವಂಚಕನ ಕೃತ್ಯ. ಗಮನಿಸಿದ್ದಾರೆ. ಆತನ ಗುರುತು ಪತ್ತೆಗೆ ಶ್ರಮಿಸುತ್ತಿದ್ದಾರೆ.