ಮಂಗಳೂರು, ಎ08(SS): ಜಾಗದ ತಕರಾರಿನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಗಂಭೀರ ಹಲ್ಲೆ ನಡೆಸಿರುವ ದುರ್ಘಟನೆ ನಡೆದಿದೆ.
ಮಂಗಳೂರಿನ ಪಚ್ಚನಾಡಿ ಬಂದಲೆ ನಿವಾಸಿ ಸವಿತ (36) ಹಲ್ಲೆಗೊಳಗಾದ ಮಹಿಳೆ.
ರಸ್ತೆಗೆ ಅಡ್ಡಲಾಗಿ ಮನೆ ನಿರ್ಮಿಸಿ ಜನರಿಗೆ ಸಮಸ್ಯೆ ನೀಡುತ್ತಿದ್ದ ವಿಚಾರವಾಗಿ ಮಹಿಳೆಯ ಮೇಲೆ ವಸಂತ್ ಪೂಜಾರಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಸವಿತಾ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವಿಚಾರಕ್ಕೆ ಸಂಭಂದಿಸಿದಂತೆ ಸವಿತ ಮತ್ತು ಅವರ ಗಂಡ ಹಿಮೇಶ್ ಕೋರ್ಟ್ ಮೆಟ್ಟಲೇರಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಗೆ ಹಲ್ಲೆ ಆರೋಪ ನಡೆಸಿರುವ ವಸಂತ್ ಪೂಜಾರಿಗೆ ಕೋರ್ಟಿನಿಂದ ನೋಟಿಸ್ ಜಾರಿಯಾಗಿದೆ.
ಈ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.