ಬಂಟ್ವಾಳ, ಏ 08 (MSP): ಗೋಳ್ತಮಜಲು ರೈಲ್ವೆ ಹಳಿಯಲ್ಲಿ ಯುವಕನೋರ್ವನ ಶವ ಏ.08 ರ ಸೋಮವಾರ ಪತ್ತೆಯಾಗಿದೆ. ಮೃತರನ್ನು ವೀರಕಂಬದ ನಿವಾಸಿ ಪುರಂದರ (28) ಎಂದು ಗುರುತಿಸಲಾಗಿದೆ.
ವೀರಕಂಬದಲ್ಲಿ ಗಿಳ್ಕಿಂಜತ್ತಾಯ ಜಾತ್ರೋತ್ಸವ ನಡೆಯುತ್ತಿದ್ದು, ಭಾನುವಾರ ರಾತ್ರಿ ಸುಮಾರು 10:30ರವರೆಗೂ ಪುರಂದರ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಕಾರ್ಯಕ್ರಮವೊಂದರ ನಿರೂಪಣೆ ಕೂಡಾ ಮಾಡಿದ್ದರೆನ್ನಲಾಗಿದೆ. ಪುರಂದರ ಅವರು ಸರ್ವೀಸ್ ಸ್ಟೇಷನ್ ಹಾಗೂ ಮಾರುತಿ ಶೋರೂಂ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ರೈಲ್ವೆ ಟ್ರಾಕ್ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಹಿಂದೆಯು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ