ಬೈಂದೂರು, ಏ 07(SM): ತಾಕತ್ತು ಇದ್ದರೆ ನನ್ನ ವಿರುದ್ಧದ ಕೇಸು ಓಪನ್ ಮಾಡಿಸಿ, ಆದ್ರೆ ಮೇ 23ರ ಮೊದಲು ಕೇಸು ಓಪನ್ ಮಾಡಿಸಿ. ಯಾಕಂದ್ರೆ ಮೇ 23 ನಂತರ ನೀವು ಮನೆಗೆ ಹೋಗ್ತೀರಿ ಆ ನಂತರ ಕೇಸು ನಾವು ಓಪನ್ ಮಾಡಿಸುತ್ತೇವೆ ಎಂದು ಬಿ.ಎಸ್. ಯಡಿಯೂರಪ್ಪ ಸಿ.ಎಂ ಎಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಚುನಾವಣೆ ನಂತರ ಯಡಿಯೂರಪ್ಪ ಕೇಸ್ ರೀ ಒಪನ್ ಮಾಡಿಸುತ್ತೇವೆ ಎಂಬ ಸಿಎಂ ಹೇಳಿಕೆಗೆ ಬೈಂದೂರಿನ ವಂಡ್ಸೆಯಲ್ಲಿ ಪ್ರತಿಕ್ರಿಯಿಸಿದ ಅವರು ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ ತಾಕತ್ತು ಸಿಎಂ ಗೆ ಇಲ್ಲ.
ಎಲ್ಲವನ್ನೂ ಎದುರಿಸಿದ್ದೇನೆ, ಮುಂದೆಯೂ ಎದುರಿಸ್ತೇನೆ ಎಂದರು. ಇನ್ನು ಮಂಡ್ಯದಲ್ಲಿ ಸಚಿವ ಪುಟ್ಟರಾಜು ಬಳಿ ಹಣಕ್ಕಾಗಿ ಬೇಡಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮಾದೇಗೌಡರ ಬಗ್ಗೆ ನನಗೆ ಗೌರವ ಇದೆ. ಮಂಡ್ಯದಲ್ಲಿ ದುಡ್ಡಿನ ಮೇಲೆ ಚುನಾವಣೆ ನಡೀತಿದೆ. ಮಂಡ್ಯ -ಮೈಸೂರು ತುಮಕೂರಲ್ಲಿ ಹಣದ ಹೊಳೆ ಹರಿಯುತ್ತಿದೆ. ಕುಮಾರಸ್ವಾಮಿ ದೇವೇಗೌಡರ ಹಣದ ರಾಜಕೀಯದ ಸ್ಯಾಂಪಲ್ ಆಗಿದೆ. ಭ್ರಷ್ಟಾಚಾರ ರಾಜ್ಯದಲ್ಲಿ ಮುಗಿಲು ಮುಟ್ಟಿದೆ. ಅಜ್ಜ- ಮೊಮ್ಮಕ್ಕಳು ಸೋಲುವುದು ಖಚಿತ ಎಂದರು.
ಇನ್ನು ಪ್ರಧಾನಿ ಮೋದಿ ಅಲೆ ಬಗ್ಗೆ ಕುಮಾರಸ್ವಾಮಿಗೆ ಚಿಂತೆ ಯಾಕೆ? ನಿಮ್ಮ ಅಲೆ ಎಲ್ಲಿದೆ ಅಂತ ಮೊದಲು ಹೇಳಿ. ರಾಜ್ಯದಲ್ಲಿ ಅಪ್ಪ ಮಕ್ಕಳ ಅಲೆ ಎಲ್ಲಿದೆ. ಇವರದ್ದು ಪರಸ್ಪರ ಕಚ್ಚಾಟವೇ ಜಾಸ್ತಿಯಾಗಿದೆ ಎಂದರು.