ಉಡುಪಿ, ಏ 07(SM): ಇಂದು ಭಾರತೀಯ ಜನತಾ ಪಕ್ಷದ ವತಿಯಿಂದ ದೇಶಾದ್ಯಂತ ನಡೆಯುತ್ತಿರುವ ಮನೆ ಮನೆ ಭೇಟಿ ಅಭಿಯಾನದ ಅಂಗವಾಗಿ ಉಡುಪಿಯಲ್ಲಿ ಶಾಸಕರಾದ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಪರವಾಗಿ ಮತಯಾಚನೆ ನಡೆಸಿದರು.
ಶಾಸಕರ ಜೊತೆ ಉಡುಪಿಯ ಪೆರಂಪಳ್ಳಿ ವಾರ್ಡ್ನಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದ ಕಾರ್ಯಕರ್ತರು ಪ್ರತೀ ಮನೆಗೆ ತೆರಳಿ ಮೋದಿಜೀಯ ಸಾಧನೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮೋದಿಯವರ ಕಾರ್ಯವನ್ನು ತಿಳಿದಂತಹ ಉದಯ್ ಕುಂದರ್, ಮುರಳಿ ಕುಂದರ್, ಪ್ರತಾಪ್ ಶೆಟ್ಟಿ, ಅಲ್ವಿನ್ ಡಿಸೋಜ ಸೇರಿದಂತೆ 25ಕ್ಕೂ ಹೆಚ್ಚು ಕಾರ್ಯಕರ್ತರು ಅನ್ಯ ಪಕ್ಷದಿಂದ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ರಾಜನ್, ಕಾರ್ಯದರ್ಶಿಗಳಾದ ಶಶಿಕಾಂತ್, ಪಕ್ಷದ ಪ್ರಮುಖರಾದ ಅರುಣ, ರಾಘವೇಂದ್ರ ಭಟ್, ಶಶಾಂಕ್, ಡೇನಿಸ್ ಹಾಗೂ ಕಾರ್ಯಕರ್ತರು ಜೊತೆಗಿದ್ದರು.