ಮಂಗಳೂರು,ಏ07(AZM):ಲಾಭದಲ್ಲಿದ್ದ ವಿಜಯ ಬ್ಯಾಂಕ್ ಅನ್ನು ಬರೋಡಾ ಬ್ಯಾಂಕ್ ಜತೆ ವಿಲೀನಗೊಳಿಸಿರುವುದೇ ಮಂಗಳೂರಿಗರಿಗೆ ಮೋದಿಯವರು ಕೊಟ್ಟ ದೊಡ್ಡ ಸಾಧನೆ ಎಂದು ಸಿಎಂ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರಕ್ಕೆಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಕುಮಾರಸ್ವಾಮಿಯವರು ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದರು. ಮಂಗಳೂರಿಗರಿಗೆ ಪ್ರಧಾನಿ ನರೇಂದ್ರ ಮೋದಿಯವರು ಏನು ಕೊಡುಗೆ ನೀಡಿದ್ದಾರೆ ಎಂದು ಓಟ್ ಹಾಕೋದು ಎಂದು ಪ್ರಶ್ನಿಸಿದರು.
ಇನ್ನು ಮಂಗಳೂರು ಹಾಗೂ ಉಡುಪಿ ಕ್ಷೇತ್ರವನ್ನು ಗೆಲ್ಲಿಸಲು ಈಗಾಗಲೇ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ನಡೆಸಿದ್ದು, ಎಲ್ಲಾ ಕ್ಷೇತ್ರಗಳಿಂದಲೂ ಉತ್ತಮ ಅಭಿಪ್ರಾಯ ದೊರಕಿದೆ ಈ ಹಿನ್ನಲೆ ಮಂಗಳೂರಿನಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಹೇಳಿದರು.
ಮಂಡ್ಯ ಚುನಾವಣೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯ ಚುನಾವಣೆಯ ಕುರಿತು ಮೇ 23ರಂದು ಹೇಳುತ್ತೇನೆ ಎಂದ ಅವರು ನನ್ನನ್ನು ಯಾವ ರೀತಿಯಲ್ಲಿ ಮುಗಿಸಬೇಕುಂತ ಕೆಲವು ಮಾಧ್ಯಗಳ ವ್ಯವಸ್ಥಾಪಕರು ಕಾಯುತ್ತಿದ್ದು, ಅವರಿಗೆ ನನ್ನ ಮೇಲೆ ಯಾಕೆ ಕೋಪ ಎಂದು ಗೊತ್ತಾಗುತ್ತಿಲ್ಲ ಹಾಗಾಗಿ ಮಾಧ್ಯಮಗಳಲ್ಲಿ ನನ್ನ ವಿರುದ್ಧವಾಗಿ ವರದಿ ನೀಡಲಾಗುತ್ತಿದೆ ಎಂದು ಹೇಳಿದರು.
ಮಂಡ್ಯ ಚುನಾವಣೆಯ ಕುರಿತು ನನ್ನ ಹೇಳಿಕೆ ಒಂದೆಡೆ ಹಾಕಿದ್ರೆ ಮತ್ತೊಂದೆಡೆ ಬೇರೆಯೇ ಹೇಳಿಕೆಯನ್ನು ಹಾಕುತ್ತಾರೆ. ಮಾಧ್ಯಮಗಳಿಗೆ ಎಥಿಕ್ಸ್ ಇದಿಯಾ ಎಂದು ಪ್ರಶ್ನಿಸಿದರು.