ಬಂಟ್ವಾಳ,ಏ.06(AZM):ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ತಂದೆ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ.
ತಂದೆ ಮಗಳ ಅಮೂಲ್ಯ ಸಂಬಂಧಕ್ಕೆ ಬೆಲೆಯೇ ಇಲ್ಲದಂತ್ತಾಗಿದೆ. ರಾಕ್ಷಸೀಯ ಮನೋಭಾವ ಹೊಂದಿರುವ ಆ ಕ್ರೂರಿ ತನ್ನ ಮಗಳ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಆರೋಪಿಯನ್ನು ಕುಕ್ಕಾಜೆ ನಿವಾಸಿ ದಾವೂದ್ ಎಂದು ಗುರುತಿಸಲಾಗಿದೆ. ಆರೋಪಿ ದಾವೂದ್ ಪಾಣೆಮಂಗಳೂರು ನಿವಾಸಿಯಾಗಿದ್ದು, ಕೆಲ ವರ್ಷಗಳಿಂದ ಮಂಚಿಗೆ ಬಂದು ವಾಸವಾಗಿದ್ದಾರೆ. ನಾಲ್ಕು ಮದುವೆಯಾಗಿರುವ ದಾವೂದ್ ಗೆ 15 ಮಕ್ಕಳಿದ್ದು, ತನ್ನ 2ನೆ ಪತ್ನಿಯ ಮಗಳ ಮೇಲೆ ಅತ್ಯಾಚಾರ ಎಸಗಿರುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ವಾರಗಳ ಹಿಂದೆ ಸಂತ್ರಸ್ತೆಯ ಮೇಲೆ ಬಾಲಕಿಯ ಅಕ್ಕನ ಗಂಡ ಕೂಡ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚೈಲ್ಡ್ ಹೆಲ್ಪ್ ಲೈನ್ ಅವರು ಸಂತ್ರಸ್ತೆಯನ್ನು ವಿಚಾರಣೆ ನಡೆಸಿದಾಗ ತಂದೆಯು ಕೂಡಾ ತನ್ನ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿದ್ದಾರೆನ್ನುವ ಆಘಾತಕಾರಿ ವಿಷಯ ಬೆಳಕಿದೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.