ಮಂಗಳೂರು, ಏ 06 (MSP): ಭಾರತ ಮತ್ತು ಪಾಕಿಸ್ತಾನದ ನಡುವೆ ಲೋಕಸಭೆ ಚುನಾವಣೆಗೆ ಮುನ್ನ ಸಂಘರ್ಷ ನಡೆಯುತ್ತದೆ ಎಂಬ ಸಂಗತಿ ಎರಡು ವರ್ಷ ಮೊದಲೇ ತಮಗೆ ಗೊತ್ತಿತ್ತು ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿಯ ಹೇಳಿಕೆಗೆ ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಪ್ರಚಾರಕ್ಕಾಗಿ ಏ.06 ರ ಮಂಗಳವಾರ ನಗರಕ್ಕೆ ಆಗಮಿಸಿದ ಅವರು, ಈ ಶಾಸ್ತ್ರ, ಜೋತಿಷ್ಯ, ರೇವಣ್ಣ ಅವರ ನಿಂಬೆ ಕಾಯಿ ಜಾತಕ ಇವೆಲ್ಲಾ ನಡೆಯಲ್ಲ ಅಂತ ಗೊತ್ತಾಗಿರಬೇಕು. ಹೀಗಾಗಿ ಚುನಾವಣಾ ತಂತ್ರಗಾರಿಕೆಗಾಗಿ ಈ ಹೇಳಿಕೆ ನೀಡುತ್ತಿದ್ದಾರೆ. ದೇಶದ ರಕ್ಷಣಾ ಇಲಾಖೆಯಲ್ಲಿರುವ ಯಾರೇ ರಕ್ಷಣಾಧಿಕಾರಿ ನಮ್ಮ ದೇಶಕ್ಕೆ ದ್ರೋಹ ಬಗೆಯುವಂತ ಕೆಲಸ ಮಾಡಲ್ಲಎನ್ನುವುದನ್ನು ಮೊದಲು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ.
ಈ ವೇಳೆ ಕುಮಾರಸ್ವಾಮಿಯ ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಹೌದು ನಂಗೂ ಸುಮಾರು 20 ವರ್ಷದ ಹಿಂದೆ ಒಬ್ಬ ಸೇನಾಧಿಕಾರಿ ಹೇಳಿದ್ರು ಪುಲ್ವಾಮ ದಾಳಿ ಆಗುತ್ತೆ ಅಂತಎಂದು ಹಾಸ್ಯ ಚಟಾಕಿ ಹಾರಿಸಿದ್ರು.ಮುಖ್ಯಮಂತ್ರಿ ಸುಳ್ಳು ಹೇಳಿಕೆ ನೀಡುವ ಮೂಲಕ ಸೈನಿಕರಿಗೆ ಅಪಮಾನ ಮಾಡ್ತಾ ಇದ್ದಾರೆ.ರಕ್ಷಣಾ ಇಲಾಖೆ ಯಾವತ್ತೂ ನಾವು ದಾಳಿ ಮಾಡ್ತಿವಿ ಅಂತ ರಿವೀಲ್ ಮಾಡಲ್ಲ.
ಅಭಿನಂದನ್ ಗೆ ಪಾಕಿಸ್ತಾನ ಚಿತ್ರಹಿಂಸೆ ಕೊಟ್ಟರೂ ಯಾವುದೇ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಅಷ್ಟು ಧೈರ್ಯದ ಸೈನಿಕರ ಬಗ್ಗೆ ಮುಖ್ಯಮಂತ್ರಿ ಈ ಥರ ಮಾತನಾಡುತ್ತಾರಲ್ಲ ಇದು ಸರಿಯಲ್ಲ. ನಾವು ಮುಖ್ಯಮಂತ್ರಿಯ ಈ ಹೇಳಿಕೆ ನಂಬಬೇಕೆ ? ಅಥವಾ ಸೈನಿಕರನ್ನು ನಂಬಬೇಕೇ? ಎಂಬುದನ್ನು ಜನಗಳಲೇ ತೀರ್ಮಾನ ಮಾಡಲಿ ಎಂದು ಹೇಳಿದರು.
ಮುಂದುವರಿಸಿ ಮಾತನಾಡಿದ ಅವರು, " ಕಾಂಗ್ರೆಸ್ ಮತ್ತು ಜೆಡಿಎಸ್ ಒಡಕು ಮೂಡಿ ಬೀದಿ ಬೀದಿಗಳಲ್ಲಿ ಜಗಳ ನಡೀತಿದೆ. ಸಂಧಾನ ಮಾತುಕತೆ ವಿಫಲ ಆಗಿದೆಸಿದ್ಧರಾಮಯ್ಯ ಬಂದು ಪ್ರಚಾರ ಮಾಡಿದರೂ ಮಂಡ್ಯದಲ್ಲಿ ಇನ್ನು ಏನೂ ಪ್ರಯೋಜನ ಇಲ್ಲ ಎಂದು ಎಚ್. ಡಿ ದೇವೇಗೌಡರೇ ಹೇಳಿದ್ದಾರೆ.ಸಿದ್ದರಾಮಯ್ಯ ಕೆಲಸಕ್ಕೆ ಬಾರದವರು ಎಂಬರ್ಥದಲ್ಲಿ ಮಾತಾಡಿದ್ದಾರೆ. ಮೇ 23 ರಂದು ಕಾಂಗ್ರೆಸ್ಸಿಗರಿಗೆ ಏನು ಮಾಡುತ್ತೇವೆ ನೋಡಿ ಎಂದು ಕುಮಾರಸ್ವಾಮಿ ಅವಾಜ್ ಹಾಕಿದ್ದಾರೆ. ಇದೆಲ್ಲ ನೋಡೋವಾಗ ಕಾಂಗ್ರೆಸ್-ಜೆಡಿಎಸ್ ಗೊಂದಲದ ಗೂಡಾಗಿದೆ
ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಕಾಂಗ್ರೆಸ್-ಜೆಡಿಎಸ್ ನ ಮಾಡೆಲ್ ಈ ರಾಜ್ಯಕ್ಕೆ ಮತ್ತೆ ಬರಬಾರದು ಎಂದು ಈ ರಾಜ್ಯದ ಜನ ತೀರ್ಮಾನ ಮಾಡ್ತಾರೆ.ದೇಶದಲ್ಲಿ ಮತ್ತೆ ಪ್ರಧಾನಿಯಾಗೋದು ನರೇಂದ್ರ ಮೋದಿಯೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.