ಮಂಗಳೂರು, ಏ 06 (MSP): ಒಂದು ಕೈಯಲ್ಲಿ ಕೋಳಿ ಮರಿ, ಮತ್ತೊಂದು ಕೈಯಲ್ಲಿ 10 ರೂ, ಕಣ್ಣಲ್ಲಿ ತುಂಬಿಕೊಂಡ ಕಣ್ಣೀರು, ಮುಖತುಂಬಾ ಕರುಣೆ, ಮುಗ್ದತೆ, ಆತಂಕ, "ನನ್ನ ಕೋಳಿಮರಿಯನ್ನು ಹೇಗಾದರೂ ಮಾಡಿ ಉಳಿಸಿಕೊಡಿ" ಎಂದು ಗೋಗರೆಯುತ್ತಿರುವ ಮಿಜೋರಾಂನ ಪುಟ್ಟ ಬಾಲಕನ ವೈರಲ್ ಆದಾ ಫೋಟೊಗೆ ನೆಟ್ಟಿಗರು ಪರವಶರಾಗಿದ್ದಾರೆ
6 ವರ್ಷದ ಪುಟಾಣಿ ಡೆರಿಕ್ ಸಿ ಲಾಲ್ಛಾನ್ಹಿಮಾ ತನ್ನ ಮನೆಯ ಸನಿಹದಲ್ಲಿ ಸೈಕಲ್ ನಲ್ಲಿ ಆಟವಾಡುತ್ತಿದ್ದಾಗ ಕೋಳಿಮರಿಯೊಂದು ಆಕಸ್ಮಿಕವಾಗಿ ಕೋಳಿ ಮರಿಯೊಂದು ಅಡ್ಡಬಂದಿದೆ ಅದೇ ವೇಳೆ ಸೈಕಲ್ ಚಕ್ರ ಕೋಳಿ ಮರಿ ಮೇಲೆ ಹತ್ತಿಬಿಟ್ಟಿತ್ತು. ಆಗಿರೋದು ಅಷ್ಟೇ ಗಾಬರಿ ಬಿದ್ದ ಪುಟಾಣಿ ಸೈಕಲ್ ಬಿಸಾಕಿ ಕೋಳಿ ಮರಿ ಜೋಪಾನವಾಗಿ ಎತ್ತಿಕೊಂಡು ಮನೆಯೊಳಗೆ ಹೋಗಿ ಅಳತೊಡಗಿದ. "ಅಪ್ಪಾ ನಡಿ ಹೋಗೋಣ ಆಸ್ಪತ್ರೆಗೆ, .ನಂಗೆ ಗೊತ್ತಾಗ್ಲೇ ಇಲ್ಲ ಅಪ್ಪಾ"ಎಂದು ಕೈಹಿಡಿದು ಎಳೆದು ಅಳತೊಡಗಿದ. ಮಗನ ಅಳು, ಕಾಳಜಿ, ಚಿಂತೆ, ಗಾಬರಿ ಕಂಡ ಅಪ್ಪ ತಟಸ್ಥನಾಗಿದ್ದ. ಯಾಕೆಂದರೆ ಆತನ ಬೊಗಸೆ ಕೈಗಳಲ್ಲಿ ಸತ್ತ ಕೋಳಿ ಮರಿ ಮಲಗಿದೆ ಎಂದು ಹೇಳುವುದಾದರೂ ಹೇಗೆ ?
ಎರಡು ದಿನಗಳಿಂದ ಅಂತರ್ಜಾಲ ಲೋಕದಲ್ಲಿ ವೈರಲ್ ಆಗಿರುವ ಈ ಫೋಟೊವನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದಾರೆ. ಮಗನನ್ನು ಸಂತೈಸಲು ಸೋತುಹೋದ ಪೋಷಕರು, ಕೊನೆಗೆ ಅನಿವಾರ್ಯವಾಗಿ ’ನೀನೆ ಹೋಗು ಆಸ್ಪತ್ರೆಗೆ ಕಂದಾ ’ ಎಂದ ಮಾತಿಗೆ ಬೇಸರವಾಗದ ಪುಟಾಣಿ ಮನೆಯಲ್ಲಿ ಹುಡುಕಾಡಿ ಒಂದು 10 ರೂ ತೆಗೆದುಕೊಂಡು, ಒಂದು ಕೈಯಲ್ಲಿ ಜೋಪಾನವಾಗಿ ಕೋಳಿ ಮರಿ ಹಿಡಿದು ಆಸ್ಪತ್ರೆಗೆ ಹೋಗಿ ಅಲ್ಲೂ ’ಕೋಳಿಮರಿಗೆ ಹುಷಾರಿಲ್ಲ ಚಿಕಿತ್ಸೆ ನೀಡಿ ’ ಎಂದು ಮನವಿ ಮಾಡತೊಡಗಿದ. ಬಾಲಕ ಮುಗ್ದತೆ ಮತ್ತು ಮಾನವಿಯತೆಯನ್ನು ಕಂಡು ನರ್ಸ್ ಒಬ್ಬರು ಕಣ್ಣೀರಾದರು. ಅವರೇ ಕ್ಲಿಕ್ಕಿಸಿದ ಫೋಟೊ ಈಗ ಎಲ್ಲೆಡೆ ಇಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಆಸ್ಪತ್ರೆಯಲ್ಲಿ ಕೋಳಿ ಮರಿಗೆ ಚಿಕಿತ್ಸೆ ಸಿಗಲಿಲ್ಲ ಎಂದ ಬಾಲಕ ಧೃತಿಗೆಡದೆ ಮನೆಗೆ ಹಿಂತಿರುಗಿ ಈ ಬಾರಿ 100 ರೂಪಾಯಿ ಹಿಡಿದು ಮತ್ತೆ ಆಸ್ಪತ್ರೆಗೆ ಹೊರಟ. ಕೊನೆಗೆ ಪೋಷಕರು ನಿಧಾನವಾಗಿ ಕೋಳಿ ಮರಿ ಈಗ ಬದುಕಿಲ್ಲ ಎಂಬ ಸತ್ಯ ಬಿಡಿಸಿ ಹೇಳಿದರು. ಆಸ್ಪತ್ರೆ ಅಥವಾ ಬೇರೆ ಎಲ್ಲೂ ಸರಿಪಡಿಸಲು ಸಾಧ್ಯವಿಲ್ಲ ಎಂಬ ಸತ್ಯ ನಿಧಾನವಾಗಿ ವಿವರಿಸಿದರು. ಈ ಮುಗ್ದ ಬಾಲಕನ ಪೋಟೋ ಹೇಳುವ ಸಂದೇಶ ನೂರಾರು ಜನರ ಮನಸ್ಸಿಗೆ ನಾಟಿದೆ.
ಈ ಘಟನೆ ಬಳಿಕ ಪುಟಾಣಿ ಡೆರಿಕ್ ಸಿ ಲಾಲ್ಛಾನ್ಹಿಮಾ ಅವನನ್ನು ಪೋಷಕರ ಉಪಸ್ಥಿತಿಯಲ್ಲಿ ಆತನ ಶಾಲೆಯಲ್ಲಿ ಸನ್ಮಾನಿಸಲಾಗಿದೆ. ವಿಶೇಷ ಎಂದರೆ ಆತನ ಶಾಲೆಯು ಮುಖ್ಯ ಶಿಕ್ಷಕ ಮಂಗಳೂರು ಮೂಲದವರು. ಬಾಲಕನ ಮಾನವೀಯ ಗುಣ, ಮತ್ತು ಜವಾಬ್ದಾರಿಯುತ ನಡವಳಿಕೆಗೆ ಕಂಡು ಮಾರು ಹೋಗಿರುವ ಮಂಗಳೂರು ಮೂಲದ ಫಾ. ಸ್ಟುವರ್ಟ್ ಪ್ರಜ್ವಲ್ ಹಾಗೂ ಶಾಲಾ ಶಿಕ್ಷಕ ವೃಂದ ಆತನನ್ನು ಸೈಂಟ್ ಪಿಯೋ ಸ್ಕೂಲ್ ನಲ್ಲಿ ಏಪ್ರಿಲ್ 4 ರಂದು ಸನ್ಮಾನಿಸಿದರು.
ಮಿಜೋರಾಮ್ ರಾಜಧಾನಿ ಐಝಾವಲ್ ನಿಂದ 20 ಕಿ.ಮೀ ದೂರದಲ್ಲಿರುವ ಸೈರಂಗ್ ನಲ್ಲಿ ಡೆರಿಕ್ ವ್ಯಾಸಂಗ ಮಾಡುತ್ತಿರುವ ಶಾಲೆ ಇದೆ. ಡೆರಿಕ್ ತಂದೆ ಧೀರಜ್ ಚೆಟ್ರಿ ಪೊಲೀಸ್ ಇಲಾಖೆಯಲ್ಲಿದ್ದರೆ, ತಾಯಿ ಲಾಲುನ್ಪುಯಿ ಗೃಹಿಣಿಯಾಗಿದ್ದಾರೆ.