ಮಂಗಳೂರು, ಆ 10(DaijiworldNews/MS): ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ್ದ ಆರೋಪಿ ವಿಖ್ಯಾತ್ ವಿಕ್ಕಿ ಬಪ್ಪಲ್ (29) ಎಂಬಾತನನ್ನು ಉರ್ವಾ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತನಿಗೆ ಪ್ರಕರಣವೊಂದಕ್ಕೆ ಜಾಮೀನು ಸಿಕ್ಕಿದ್ದು, ಈತನ ವಿರುದ್ಧ ಮಂಗಳೂರು ನಗರ, ಇತರ ಠಾಣೆಗಳಲ್ಲಿ ಸುಮಾರು 11 ಪ್ರಕರಣಗಳು ಇದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ 14 ದಿವಸಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.