ಕಾಸರಗೋಡು, ಆ 08 (DaijiworldNews/SM): ಯುವತಿ ಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಲಾಟಿ ಬಳಿ ನಡೆದಿದೆ. ಮೈಲಾಟಿ ಎಕ್ಕೋಲ್ ನ ನೀತು ಕೃಷ್ಣ(21) ಮೃತಪಟ್ಟವರು.
ತನ್ನ ಸಹಪಾಠಿಗೆ ವಾಟ್ಸ್ ಅಪ್ ಸಂದೇಶ ಕಳುಹಿಸಿ ಈಕೆ ಈ ಕೃತ್ಯ ನಡೆಸಿದ್ದಾಳೆ. ಸಂದೇಶ ಲಭಿಸಿದ ಕೂಡಲೇ ಸಹಪಾಠಿ ಈಕೆಯ ಮೊಬೈಲ್ ಗೆ ಕರೆ ಮಾಡಿದಾಗ ರಿಸೀವ್ ಮಾಡ ದಿದ್ದುದರಿಂದ ಸಂಬಂಧಿಕರಿಗೆ ಮಾಹಿತಿ ನೀಡಿದ್ದು , ಇದರಂತೆ ಸಂಬಂಧಿಕರು ಮನೆಗೆ ತಲಪಿದಾಗ ನೇಣು ಬಿಗಿದಿರುವುದು ಕಂಡುಬಂದಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ತಂದೆ ಕೆ . ಕೃಷ್ಣನ್ ಹೊಲಿಗೆ ಕಾರ್ಮಿಕರಾಗಿದ್ದು , ತಾಯಿ ಕೆ . ಟಿ ಶ್ರೀಲತಾ ಕಾಞ೦ಗಾಡ್ ಗೆ ತೆರಳಿದ್ದರು. ನೀತು ಕೃಷ್ಣ ಪದವಿ ಶಿಕ್ಷಣ ಪಡೆದು , ಬಿ . ಎಡ್ ಶಿಕ್ಷಣಕ್ಕೆ ಪೂರ್ವ ಸಿದ್ಧತೆ ನಡೆಸಿದ್ದಳು. ಈ ನಡುವೆ ವಿವಾಹ ನಿಶ್ಚಯ ನಡೆದಿತ್ತು ಎನ್ನಲಾಗಿದೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821