ಉಡುಪಿ, ಆ 08 (DaijiworldNews/HR): ಉಡುಪಿಯ ಕಾಲೇಜುವೊಂದರ ವಿಡಿಯೋ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದ್ದು, ಬೆಂಗಳೂರಿನಿಂದ ಸಿಐಡಿ ಪೊಲೀಸರ ತಂಡ ಉಡುಪಿಗೆ ಆಗಮಿಸಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸಲು ಇಂದು ಸಿಐಡಿ ತಂಡ ಉಡುಪಿಗೆ ಆಗಮಿಸಿದ್ದು, ತಂಡವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ಸೂಕ್ತ ಮಾಹಿತಿ ಪಡೆದುಕೊಂಡಿದೆ.
ಇನ್ನು ತನಿಖಾ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಗಳೂ ಇದ್ದು, ಬಳಿಕ ತನಿಖಾಧಿಕಾರಿಗಳು ಘಟನೆಯ ಸಂಪೂರ್ಣ ವಿವರಗಳನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಸಿಐಡಿ ತಂಡದ ನೇತೃತ್ವವನ್ನು ಅಂಜುಮಾಲಾ ನಾಯಕ್ ವಹಿಸಿದ್ದಾರೆ.