ಉಡುಪಿ, ಎ05(SS): ಕಾರಿನಲ್ಲಿ ಸಾಗಿಸುತಿದ್ದ ದಾಖಲೆ ರಹಿತ 1.25 ಲಕ್ಷ ರೂಪಾಯಿ ನಗದನ್ನು ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ ತಂಡ ಕಟಪಾಡಿ ಶಿರ್ವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ದಾಖಲೆ ರಹಿತ ನಗದನ್ನು ವಶಪಡಿಸಿಕೊಂಡಿದ್ದಾರೆ.
2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳು ಸೇರಿದಂತೆ 500, 100, 50 ಮತ್ತು 10 ರೂಪಾಯಿ ನೋಟುಗಳ ಬಂಡಲ್ ವಶಪಡಿಸಿಕೊಳ್ಳಲಾಗಿದೆ.
ಬೆಳ್ಮಣ್ ಜಂತ್ರದಲ್ಲಿರುವ ಗುಜರಿ ವ್ಯಾಪಾರ ನಡೆಸುತ್ತಿರುವ ಉದ್ಯಾವರ ನಿವಾಸಿ ಸುರೇಶ್ ಕೋಟ್ಯಾನ್ ಅವರು ತಮ್ಮ ಕಾರಿನಲ್ಲಿ ಹಣವನ್ನು ಕೊಂಡೊಯ್ಯುತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳು ಕಟಪಾಡಿ-ಶಿರ್ವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.