ಉಡುಪಿ, ಆ 06 (DaijiworldNews/SM): ಕೋಟ ಪೊಲೀಸರು ಜೂಜು ಕೇಂದ್ರದ ಮೇಲೆ ದಾಳಿ ನಡೆಸಿ 24 ಮಂದಿಯನ್ನು ಬಂಧಿಸಿ 9 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬ್ದುಲ್ ಮುನೀರ್, ಸಲ್ಮಾನ್, ಬಸವರಾಜ, ವಿಷ್ಣು ಕೆ.ವಿ, ದಿನೇಶ್, ಕೆ.ವಿನಾಯಕ ಸಂದೀಪ, ಕೃಷ್ಣ, ಸುಧಾಕರ, ನಾಗರಾಜ, ಸುಬ್ರಹ್ಮಣ್ಯ, ಶ್ರೀಧರ ಇ.ಆಂಟನಿ ಮಶ್ಚರೇನಸ್, ಶೃತಿರಾಜ್, ರಘು, ಹುಸೇನ್, ಸಂದೇಶ್, ರಾಜು ಮೊಗೇರ, ಗೋಪಾಲ, ಗಣೇಶ್, ಮಿಥುನ್, ಸುಧರ್ಮ, ದಾಳಿ ವೇಳೆ ಜೂಜಾಟದಲ್ಲಿ ತೊಡಗಿದ್ದ ಕಮಲಾಕ್ಷ ಮತ್ತು ಸುಧಾಕರ ಅವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಸಂಜೆ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಗುಡ್ಡೆಯಂಗಡಿ ಕ್ರಾಸ್ ಬಳಿಯ ವಿನಾಯಕ ಸಭಾಂಗಣದಲ್ಲಿ ಜೂಜಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಟ ಪಿಎಸ್ ಐ ಶಂಬುಲಿಂಗಯ್ಯ ಮತ್ತಿತರರ ತಂಡ ದಾಳಿ ನಡೆಸಿ 24 ಮಂದಿಯನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 9,77,260 ರೂ. ಎಂದು ಅಂದಾಜಿಸಲಾಗಿದೆ.
ವಶಪಡಿಸಿಕೊಂಡ ಸೊತ್ತುಗಳಲ್ಲಿ 1,49,680 ರೂಪಾಯಿ ನಗದು, ಜೂಜಾಟದ ಎಲೆಗಳು - 52, ಸ್ಟೀಲ್ ಟೇಬಲ್ - 3, ಪ್ಲಾಸ್ಟಿಕ್ ಕುರ್ಚಿಗಳು - 24, 3 ಕಾರುಗಳು, 2 ಮೋಟಾರ್ ಬೈಕ್ಗಳು, 2 ಸ್ಕೂಟರ್ ಮತ್ತು ಟೇಬಲ್ ಕ್ಲಾತ್ ಸೇರಿವೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.