ಮಂಗಳೂರು,ಏ 05 (MSP): ದಕ್ಷಿಣ ಕನ್ನಡದಲ್ಲಿ ಈ ಬಾರಿಯ ಲೋಕಸಮರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದು, ಬಿಜೆಪಿ ಪಕ್ಷದ ನಳಿನ್ಕುಮಾರ್ ಕಟೀಲು ಅಥವಾ ಕಾಂಗ್ರೆಸ್ನ ಮಿಥುನ್ ರೈ -ಇವರಿಬ್ಬರಲ್ಲಿ ಯಾರೇ ಗೆಲುವು ಸಾಧಿಸಿದರೂ ಇತಿಹಾಸದಲ್ಲಿ ದಾಖಲಾಗುವುದು ಖಚಿತ.
ಒಂದು ವೇಳೆ ನಳಿನ್ ಕುಮಾರ್ ಕಟೀಲ್ ಗೆದ್ದರೆ ಅದು ಅವರಿಗೆ ಹ್ಯಾಟ್ರಿಕ್ ಸಾಧನೆಯಾಗುತ್ತದೆ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಜಯಗಳಿಸಿದರೆ 29 ವರ್ಷಗಳ ಬಳಿಕ ಬಿಜೆಪಿಯನ್ನು ಸೋಲಿಸಿದ ಸಾಧನೆ ಇವರ ಮುಡಿಗೇರುತ್ತದೆ. ಇದಲ್ಲದೆ ಈವರೆಗೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಗೆದ್ದವರ ಪೈಕಿ ಇವರೇ ಕಿರಿಯ ಸಂಸದ ಎನ್ನುವ ಕೀರ್ತಿಗೆ ಪಾತ್ರರಾಗುತ್ತದೆ. ಈ ಹಿಂದೆ ಗೆದ್ದ ಜನಾರ್ದನ ಪೂಜಾರಿ, ಧನಂಜಯಕುಮಾರ್ ಮತ್ತು ನಳಿನ್ ಇವರೆಲ್ಲರೂ ಮೊದಲ ಬಾರಿಗೆ ಸಂಸದರಾದಾಗ 40ದಾಟಿತ್ತು. ಆದರೆ ಮಿಥುನ್ ಇನ್ನು 35ರ ಯುವಕ.
ಇನ್ನೊಂದು ವಿಚಾರ ಎಂದರೆ ಇಬ್ಬರ ಸ್ವರ್ಧೆಗೂ ಎರಡು ಪಕ್ಷದಲ್ಲೂ ಒಮ್ಮತದ ನಿರ್ಧಾರ ಇರಲಿಲ್ಲ. ನಳಿನ್ ಕುಮಾರ್ ಕಟೀಲ್ ಗೆ ಸ್ವ ಪಕ್ಷೀಯರಿಂದಲೇ ವಿರೋಧ ಇದ್ದರೂ ಕೂಡಾ ಪಕ್ಷ ಅವರನ್ನೇ ಸ್ಪರ್ಧೆಗೆ ಇಳಿಸಿದೆ. ಇನ್ನು ಕಾಂಗ್ರೆಸ್ ಲ್ಲೂ ಭಿನ್ನ ವಾತಾವರಣವಿಲ್ಲ. ಮಿಥುನ್ ಸ್ವರ್ಧೆಗೆ ಪಕ್ಷದಲ್ಲಿ ಒಕ್ಕೊರಲಿನ ದ್ವನಿ ಇರಲಿಲ್ಲ. ಆದರೂ ಕಾಂಗ್ರೆಸ್ ತನ್ನ ಹಳೆಯ ಸಂಪ್ರದಾಯವನ್ನು ಮುರಿದು ಯುವಕರಿಗೆ ಮಣೆ ಹಾಕಿದೆ. ಹೀಗಾಗಿ ಇಬ್ಬರ ನಡುವೆಯೂ ಜಿದ್ದಾಜಿದ್ದಿನ ಫೈಟ್ ಇದೆ.
ಈ ಕ್ಷೇತ್ರದಲ್ಲಿ ಮೊದಲ ಚುನಾವಣೆ ಅಂದರೆ 1951ರಿಂದ ಹಿಡಿದು 1989ರ ತನಕ ನಡೆದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ನಡೆದ ಎಲ್ಲಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆದ್ದು ನಾಲ್ಕು ದಶಕಗಳ ಕಾಲ ಹಿಡಿತ ಸಾಧಿಸಿತ್ತು. ಆದರೆ ಚಿತ್ರಣ ಬದಲಾಗಿದ್ದು 1991 ರಲ್ಲಿ ವಿ.ಧನಂಜಯ ಕುಮಾರ್ ಗೆಲ್ಲುವ ಮೂಲಕ. ಆ ಬಳಿಕ ಕಾಂಗ್ರೆಸ್ ಭದ್ರಕೋಟೆ ಮುರಿದು ಬಿಜೆಪಿ ಭದ್ರಕೋಟೆಯಾಗಿ ಮಾರ್ಪಟ್ಟಿತ್ತು.
ಒಟ್ಟಾರೆ ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ಮುರಿದು ಕೀರ್ತಿ ಮಿಥುನ್ ಗೆ ಸಲ್ಲುತ್ತಾ ಅಥವಾ ಮತ್ತೆ ಬಿಜೆಪಿ ಭದ್ರಕೋಟೆ ಬಲಪಡಿಸಿದ ಕೀರ್ತಿ ನಳಿನ್ ಗೆ ಸಲ್ಲುತ್ತಾ ಎನ್ನುವುದು ರಿಸಲ್ಟ್ ವರೆಗೆ ಕಾಯಲೇಬೇಕು.