ಉಳ್ಳಾಲ, ಆ 04 (DaijiworldNews/SM): ಅಕ್ರಮವಾಗಿ ಮರಳು ದಾಸ್ತಾನಿರಿಸಿದ ಸ್ಥಳಕ್ಕೆ ದಾಳಿ ನಡೆಸಿದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸ್ ತಂಡ 10 ಲೋಡ್ ಮರಳು ವಶಕ್ಕೆ ಪಡೆದುಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಡಿ ಸಮೀಪ ನಿನ್ನೆ ತಡರಾತ್ರಿ ವೇಳೆ ನಡೆದಿದೆ.
ಅಕ್ರಮ ಮರಳು ದಾಸ್ತಾನು ಇರಿಸಿದ ಕೋಡಿ ನಿವಾಸಿಗಳಾದ ಉಮ್ಮರ್, ನೌಫಾಲ್, ಹನೀಫ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ತಡರಾತ್ರಿ 1 ಗಂಟೆ ವೇಳೆ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳದಿಂದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.