ಕುಂದಾಪುರ, ಆ 04 (DaijiworldNews/HR): ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿಯ ಸಮಸ್ಯೆಗಳಿಗೆ ಸ್ಪಂದಿಸುವಂತೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಬಂದರು ಹಾಗೂ ಮೀನುಗಾರಿಕಾ ಸಚಿವ ಸರ್ಬಾನಂದ್ ಸೋನುವಾಲ್ ಅವರನ್ನು ಭೇಟಿ ಮಾಡಿ ವಿನಂತಿಸಿದ್ದಾರೆ.
ಶುಕ್ರವಾರ ಸಚಿವರನ್ನು ಭೇಟಿ ಮಾಡಿದ ಸಂಸದ ರಾಘವೇಂದ್ರ ಅವರು, ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗರಿಗೆ ರೂ 85.00ಕೋಟಿ ಮಂಜೂರಾಗಿದ್ದು,ಸಿ.ಆರ್.ಝೆಡ್. ಕ್ಲಿಯರೆನ್ಸ್ ಮಾಡಿ ಆದಷ್ಟು ಬೇಗ ಕಾಮಗಾರಿ ಕೈಗೊಳ್ಳಲು ಅನುಕೂಲ ಮಾಡಿಕೊಡಬೇಕು. ಉಪ್ಪುಂದ ದೋಣಿ ದುರಂತದಲ್ಲಿ ಇಬ್ಬರು ಮೀನುಗಾರರು ಮೃತಪಟ್ಟ ಸ್ಥಳದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಬ್ರೇಕ್ ವಾಟರ್ ಹಾಗೂ ಕಿರು ಬಂದರು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಬೈಂದೂರಿನಲ್ಲಿ ರೂ. 228.78 ಕೋಟಿ ವೆಚ್ಚದಲ್ಲಿ ಬಹು ಉದ್ಧೇಶಿತ ಹಾರ್ಬರ್ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಕರೆಯಲಾಗಿದ್ದ ಟೆಂಡರ್ ಪ್ರಕಾರ ಖಾಸಗೀ ಕಂಪೆನಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಇದರಿಂದ ಉದ್ಧೇಶಿತ ಯೋಜನೆಗಳಿಗೆ ಬ್ರೇಕ್ವಾಟರ್ ಮತ್ತು ಬರ್ತಿಂಗ್ ಸೌಲಭ್ಯಗಳ ಮೇಲೆ ಹೆಚ್ಚಿನ ಬಂಡವಾಳ ವೆಚ್ಚದ ಅಗತ್ಯವಿರುವುದರಿಂದ, ಕೇಂದ್ರ ಸರ್ಕಾರವೇ ಖುದ್ದಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂತಿಸಲಾಗಿದ್ದು, ಸಚಿವರು ಈ ಬಗ್ಗೆ ಸಕಾರಾಥ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರ ಪ್ರಕಟಣೆ ತಿಳಿಸಿದೆ.