ಬಂಟ್ವಾಳ, ಆ 3 (DaijiworldNews/SM): ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಯುವಕನೋರ್ವನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ನರಿಕೊಂಬು ಗ್ರಾಮಪಂಚಾಯತ್ ಸದಸ್ಯೆ ಜುಬೈದಾ ಅವರ ಮಗ ನರಿಕೊಂಬು ನಿವಾಸಿ ರಿಕ್ಷಾ ಚಾಲಕ ಅಬುಬಕ್ಕರ್ ಸಿದ್ದೀಕ್ ಎಂಬಾತ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಂದೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಮೆಲ್ಕಾರ್ ಮಹಿಳಾ ಕಾಲೇಜಿನಿಂದ ಮನೆಗೆ ಹೋಗಲು ರಸ್ತೆ ಬದಿಯಲ್ಲಿ ಬಸ್ ಗಾಗಿ ಕಾಯುತ್ತಾ ನಿಂತಿದ್ದ ವೇಳೆ ,ಬೈಕಿನಲ್ಲಿ ಬಂದ ಯುವಕ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಬಾಲಕಿಗೆ ಯುವಕ ಕಿರುಕುಳ ನೀಡಿದ ಕಾರಣ ಹೆದರಿದ ಬಾಲಕಿ ಮೂರ್ಚೆ ಹೋಗಿ ರಸ್ತೆ ಬದಿ ಬಿದ್ದಿದ್ದಳು, ಇದನ್ನು ನೋಡಿದ ಕಾಲೇಜಿನವರು ಮನೆಯವರಿಗೆ ಪೋನ್ ಮಾಡಿ ತಿಳಿಸಿದ್ದಾರೆ. ವಿಷಯ ತಿಳಿದ ಬಾಲಕಿಯ ತಂದೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದು,ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪರಿಣಾಮವಾಗಿ ಅವಳು ಹೆದರಿ ಮೂರ್ಚೆ ತಪ್ಪಿ ಬಿದ್ದಿದ್ಧಾಳೆ ಎಂದು ದೂರು ನೀಡಿದ್ಧಾರೆ ಎನ್ನಲಾಗಿದೆ.
ಮಾದಕ ಚಾಕಲೇಟ್ ನೀಡಿದ್ದ: ಹೀಗೊಂದು ಸುದ್ದಿ ಹರಿದಾಡಿತ್ತು:
ರಿಕ್ಷಾ ಚಾಕನೋರ್ವ ಬಾಲಕಿ ಗೆ ಮಾದಕ ಚಾಕಲೇಟ್ ನೀಡಿದ್ದ,ಚಾಕಲೇಟ್ ತಿಂದ ಬಾಲಕಿ ಮೂರ್ಚೆ ಹೋಗಿ ಬಿದ್ದಿದ್ದಾಳೆ, ಅವಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ, ಹೀಗೊಂದು ಸುದ್ದಿಯೊಂದು ಹರಡಿದ ಕೂಡಲೇ ಆಸ್ಪತ್ರೆಯಲ್ಲಿ ಜನ ಸೇರಿದ್ದರು. ವಿಷಯ ತಿಳಿದ ಕೂಡಲೇ ಚಾಕಲೇಟ್ ನ್ನು ಪೋಲೀಸರು ವಶಕ್ಕೆ ಪಡದುಕೊಂಡು ಪರೀಕ್ಷೆ ನಡೆಸಿದ್ದಾರೆ. ಆದರೆ ಚಾಕಲೇಟ್ ಸೀಲ್ಡ್ ಆಗಿದ್ದು ಮಾದಕ ಚಾಕಲೇಟ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಯಾವುದೇ ಸಂದೇಹ ಬೇಡ, ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
ಏನಿದು ಚಾಕಲೇಟ್?
ಇತ್ತೀಚಿಗೆ ಮಂಗಳೂರಿನಲ್ಲಿ ಬಾರಿ ಸುದ್ದಿಯಾಗಿದ್ದ ಅಮಲು ನೀಡುವ ಮಾದಕ ಚಾಕಲೇಟ್ ಬಂಟ್ವಾಳಕ್ಕೂ ಕಾಲಿಟ್ಟಿತಾ? ಹೀಗೊಂದು ಸುದ್ದಿ ಜೋರಾಗಿತ್ತು. ಅದು ಕಾಲೇಜು ಕ್ಯಾಂಪಸ್ ಗಳಲ್ಲಿ ಚಾಕಲೇಟ್ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು.
ಈಗಾಗಿ ಪೋಲೀಸರು ಕೆಲ ಹೊತ್ತು ತಲೆಕೆಡಸಿಕೊಂಡಿದ್ದರು. ಆದರೆ ಆರೋಪಿ ಬಂಧನದ ಬಳಿಕ ಸತ್ಯ ವಿಚಾರ ಬೆಳಕಿಗೆ ಬರಬಹುದು. ಜೊತೆಗೆ ಬಾಲಕಿಯನ್ನು ಪರೀಕ್ಷೆ ನಡೆಸಿದ ವೈದ್ಯರ ಏನು ಹೇಳುತ್ತಾರೆ ಇದೆಲ್ಲಾ ಮಾಹಿತಿಯ ಬಳಿಕ ಸತ್ಯಾಂಶವನ್ನು ತಿಳಿಯಬುದು.