ಮಂಗಳೂರು , ಆ 3 (DaijiworldNews/AK): ಜೈವಿಕ ಪರಿಸರ ಜೀವಿಗಳ ಉಳಿವಿಗೆ ಅತ್ಯಗತ್ಯ. ಮರಗಿಡಗಳು ನಮಗೆ ಉಸಿರಾಡಲು ಆಮ್ಲಜನಕ ನೀಡುತ್ತದೆ.ಆದರೆ ನಾವು ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದೇವೆ. ಇದನ್ನು ತಡೆಗಟ್ಟುವುದು ಅನಿವಾರ್ಯ ಎಂದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಡಾ.ರವಿ ಡಿ.ಎಸ್ ಹೇಳಿದ್ದಾರೆ.
ನಗರದಲ್ಲಿ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂ.ಐ. ಒ)ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಪಂಪ್ ವೆಲ್, ಮಂಗಳೂರು ಹಾಗೂ ಕರ್ನಾಟಕ ಅರಣ್ಯ ಇಲಾಖೆ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ವನಮಹೊತ್ಸವದ ಅಂಗವಾಗಿ ಜುಲೈ 29ರಂದು ’ಎಂ.ಐ.ಒ- ಸಹಸ್ರ ವ್ರಕ್ಷಾಭಿಯಾನ-2023”ರ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ದ.ಕ ಡಿಸ್ಟ್ರಿಕ್ಟ್ ಸರ್ವೆಯಿಲ್ಲನ್ಸ್ ಆಫೀಸರ್ ಡಾ.ನವೀನ್ ಚಂದ್ರ ಕುಲಾಲ್ ಮಾತನಾಡಿ, ಪರಿಸರದ ನಾಶವನ್ನು ನಾವಿಂದು ಎಗ್ಗಿಲ್ಲದೆ ಮಾಡುತ್ತಿದ್ದೇವೆ.ಗಿಡಮರಗಳು ಕಾಣೆಯಾಗಿವೆ,ಪರಿಸರ ಅಸಮತೋಲನಕ್ಕೆ ನಾವೇ ಕಾರಣರಾಗುತ್ತಿದ್ದೇವೆ.ಎಂ.ಐ. ಒ ದ ಪರಿಸರದ ಬಗೆಗಿನ ಕಾಳಜಿ ನನಗೆ ಇಷ್ಟವಾಯಿತು.ಸರಕಾರಗಳು ಇಲಾಖೆಗಳು ಕೂಡಾ ಇವುಗಳಿಗೆ ಪೂರಕವಾಗಿರುವ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿವೆ ಎಂದರು.
ಎಂ. ಐ.ಒ ದ ಸೀನಿಯರ್ ಸರ್ಜಿಕಲ್ ಆಂಕಾಲಜಿಸ್ಟ್ ಡಾ.ರೊಹನ್ ಚಂದ್ರ ಗಟ್ಟಿ ಮಾತನಾಡಿ , ನಗರಗಳು ಬೆಳೆದಂತೆಲ್ಲ ವೃಕ್ಷಗಳು ಕಣ್ಮರೆಯಾಗುತ್ತಿವೆ.ವೃಕ್ಷ ನೆಡಲು ಎಲ್ಲರಿಗೂ ಸ್ವಂತ ಸ್ಥಳಾವಕಾಶ ಇಲ್ಲದಿದ್ದರೆ ಕನಿಷ್ಠ ಪಕ್ಷ ನೆಟ್ಟಿರುವ ವೃಕ್ಷಗಳನ್ನು ಕಾಪಾಡಿ, ಇಲ್ಲವೇ ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ.ದೇವರ ರೂಪದಲ್ಲಿ ವ್ರಕ್ಷಗಳೇ ಕಣ್ಣ ಮುಂದಿವೆ ಅವುಗಳಿಂದ ನಾವು ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ ಎಂದರು.
ಚಿತ್ರನಟ, ದೀಪಕ್ ರೈ ಪಾಣಾಜೆ ಮಾತನಾಡಿ, ಹಸಿರು ಆರೋಗ್ಯದ ಉಸಿರು ಎನ್ನುವುದು ಅಕ್ಷರಶ ಸತ್ಯ. ವೃಕ್ಷ ನೆಡುವ ವ್ರಕ್ಷಾಬಿಯಾನವು ನಿರಂತರ. ಸಮಾರೋಪ ಎನ್ನುವುದು ಕಾರ್ಯಕ್ರಮದ ಕೊನೆಯಷ್ಟೆ.ತಮ್ಮ ಕಾರ್ಯಗಳ ಮಧ್ಯೆ ಈ ರೀತಿಯ ಪ್ರಕೃತಿ ಪ್ರೇಮದ ಕಾರ್ಯಕ್ರಮಗಳು ಎಂ. ಐ. ಒ ಮಾಡುತ್ತಿರುವುದು ಮತ್ತು ನಾನು ಎಂ.ಐ.ಒ ದ ಭಾಗವಾಗಿರುವುದು ಹೆಮ್ಮೆಯೆನಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳು ಸಾಂಕೇತಿಕವಾಗಿ ವೃಕ್ಷಕ್ಕೆ ನೀರೆರೆಯುವ ಮೂಲಕ ಪೋಷಣೆಯ ಸಂದೇಶ ಸಾರಿದರು.ಸಭಾಕಾರ್ಯಕ್ರಮದ ತರುವಾಯ ಸಂಸ್ಥೆಯ ಸಿಬ್ಬಂದಿಗಳಿಗೆ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕುರಿತಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಚೀಫ್ ಆಪರೇಟಿಂಗ್ ಆಫೀಸರ್ ಡಾ.ಲಾಲ್ ಮಡತ್ತಿಲ್ ಅತಿಥಿಗಳಿಗೆ ಸ್ವಾಗತ ಕೋರಿದರು.ಆಪರೇಷನ್ ಮ್ಯಾನೇಜರ್ ರಾಘವೇಂದ್ರ ಸಿಂಗ್ ಧನ್ಯವಾದ ಸಮರ್ಪಿಸಿದರು. ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.