ಕಾರ್ಕಳ, ಆ 3 (DaijiworldNews/HR): ನಿಟ್ಟೆ ಗುಂಡ್ಯಡ್ಕದ ಕರಿಕಲ್ಲಿನ ಕ್ವಾರೆಯಲ್ಲಿ ಕಾರ್ಮಿಕ ದಲಿತ ಯುವಕ ಬಾಗಲಕೋಟೆಯ ವೆಂಕಟೇಶ್ (32) ಸಾವಿಗೆ ಸ್ಟೋಟಕ ಕಾರಣವೆಂಬ ಮಹತ್ವದ ಅಂಶ ಪೊಲೀಸ್ ಇಲಾಖೆ ತನಿಖೆಯಲ್ಲಿ ದೃಢಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರೆ ಮಾಲಕ ಹಾಗೂ ಸ್ಫೋಟ ನಡೆಸಿದ ಬಾಲಾಜಿ ನಾಮಾಂಕಿತ ಸಂಸ್ಥೆಯ ಮೇಲೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕ್ವಾರೆಯಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ ಸ್ಪೋಟಕ ಬಳಸಿ ಕರಿಕಲ್ಲನ್ನು ಸ್ಪೋಟಿಸಿದಾಗ ಭಾರೀ ಗಾತ್ರದ ಕರಿಕಲ್ಲು ವೆಂಕಟೇಶ್ ತಲೆ ಭಾಗಕ್ಕೆ ಬಂದೆರಗಿ ಘಟನಾ ಸ್ಥಳದಲಗಲಿಯೇ ಕುಸಿದು ಬಿದ್ದರು. ಪರಿಣಾಮವಾಗಿ ರಕ್ತಸ್ರಾವದೊಂದಿಗೆ ಮಣಿಪಾಲ ಆಸ್ಪತ್ರೆ ಗೆ ದಾಖಲಿಸಲಾಗಿತ್ತಾದರೂ ಅದಾಗಲೇ ವೆಂಕಟೇಶ್ ಜೀವತೆತ್ತದರು.
ಇನ್ನು ಕರಿಕಲ್ಲಿನ ಕ್ವಾರೆಯಲ್ಲಿ ಘಟನೆ ಸಂಭವಿಸಿದ ದಿನದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಡುಪಿ ಜಿಲ್ಲೆಯಲ್ಲಿದ್ದು, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅದೇ ದಿನದಂದು ಕಾರ್ಕಳದಲ್ಲಿ ಸಂಭವಿಸಿದ ಘಟನೆಯಿಂದಾಗಿ ಯುವಕನೊಬ್ಬ ಮೃತ ಪಟ್ಟಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ತಮಡುಗಟ್ಟಿದ್ದು, ಸ್ಪೋಟಕದ ತೀವ್ರತೆಯನ್ನು ಪೊಲೀಸ್ ಇಲಾಖೆ ಅಂದಾಜಿದರು. ಕ್ವಾರೆ ಮಾಲಕರು ಹೇಳಿದ ಕಡ್ಲೆಪುರಿ ಕಥೆಗೆ ಇತಿಶ್ರೀ ಹಾಕಿದ ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿರುವುದಕ್ಕೆ ನಾಗರಿಕ ಸಮಾಜದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿವೆ.