ಕಾಸರಗೋಡು, ಜು 31 (DaijiworldNews/HR): ನೀರಿನ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನೀಲೇಶ್ವರ ಬಂಗಳ ದಲ್ಲಿ ಸೋಮವಾರ ಸಂಜೆ ನಡೆದಿದೆ.
ಬಂಗಳ ಕರಿಕುಂಡುವಿನ ಅಲ್ಬಿನ್ ಸೆಬಾಸ್ಟಿಯನ್ (16) ಮೃತ ಪಟ್ಟವನು.
ಸೋಮವಾರ ಸಂಜೆ ಸಹಪಾಠಿಗಳ ಜೊತೆ ಮನೆ ಸಮೀಪದ ಗಣಿಗಾರಿಕೆ ನಡೆಸಿದ್ದ ಸ್ಥಳದಲ್ಲಿ ಹೊಂಡದಲ್ಲಿ ಸ್ನಾನ ಕ್ಕಿಳಿದ ಸಂದರ್ಭದಲ್ಲಿ ಈ ದುರಂತ ನಡೆದಿದೆ.
ನೀರಿನಲ್ಲಿ ಮುಳುಗಿದ್ದ ವಿದ್ಯಾರ್ಥಿಗಾಗಿ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ. ಮಂಗಳವಾರ ಬೆಳಿಗ್ಗೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಕಣ್ಣೂರಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಕಣ್ಣೂರಿನಿಂದ ಆಗಮಿಸಿದ ಮುಳುಗು ತಜ್ಞರು ಶೋಧ ನಡೆಸಿ ಮೃತ ದೇಹವನ್ನು ಮೇಲ ಕ್ಕೆತ್ತಿದರು.
ಇನ್ನು ಮೃತ ದೇಹ ವನ್ನು ಜಿಲ್ಲಾಸ್ಪತ್ರೆ ಯಲ್ಲಿ ಇರಿಸಲಾಗಿದೆ.