ಕುಂದಾಪುರ, ಜು,31 (DaijiworldNews/Ak): ಜುಲೈ 23ರಂದು ನಾಪತ್ತೆಯಾಗಿದ್ದ ಜಡ್ಕಲ್ ಗ್ರಾಮದ ಕೊಳಕೆಹೊಳೆ ಮೆಕ್ಕೆ ನಿವಾಸಿ ಮಂಜ ಅವರ ಪುತ್ರ ಸುರೇಶ್ (28) ಅವರ ಮೃತದೇಹ 7 ದಿನಗಳ ಬಳಿಕ ಜಡ್ಕಲ್ ಸಮೀಪದ ಹಯ್ಯಂಗಾರ್ ಕೆರೆಯಲ್ಲಿ ಪತ್ತೆಯಾಗಿದೆ.
ಜುಲೈ 23 ರ ಶನಿವಾರ ರಾತ್ರಿ ತಮ್ಮ ಕುಟುಂಬ ಸದಸ್ಯರೊಂದಿಗೆ ರಾತ್ರಿ ಊಟದ ನಂತರ ಸುರೇಶ್ ರಾತ್ರಿ 8 ಗಂಟೆ ಸುಮಾರಿಗೆ ಮಲಗಿದ್ದರು. ಮರುದಿನ ಬೆಳಗ್ಗೆ ಎದ್ದಾಗ ಆತ ಕಾಣೆಯಾಗಿದ್ದ.
ಸುರೇಶ್ಗೆ ಕೆರೆಯದಡದಲ್ಲಿ ಕುಳಿತು ಗಂಟೆಗಟ್ಟಲೆ ಕೆರೆಯತ್ತ ಕಣ್ಣು ಹಾಯಿಸುವ ಅಭ್ಯಾಸವಿತ್ತು ಎಂದು ಸ್ಥಳೀಯರು ಹೇಳ್ತಾರೆ. ನಾಪತ್ತೆಯಾದ ದಿನದಿಂದ ಕೆರೆಯ ಸಮೀಪವೇ ಇದ್ದಿರಬಹುದು ಎನ್ನಲಾಗಿದ್ದು, ಭಾರೀ ಮಳೆಗೆ ಕೆರೆಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಸುರೇಶ್ ಮೃತದೇಹವನ್ನು ಗುರುತಿಸಲು ಕುಟುಂಬದವರು ಸ್ವಲ್ಪ ಸಮಯ ತೆಗೆದುಕೊಂಡರು ಎನ್ನಲಾಗಿದೆ.