ಕಾಸರಗೋಡು, ಜು 29 (DaijiworldNews/AK):ಸುಮಾರು ಒಂದೂವರೆ ದಶಕದ ಹಿಂದಿನ ಚವು ಮಂಜೇಶ್ವರ ಸಮೀಪದ ಮನೆಯೊಂದರ ಶೆಡ್ ನಲ್ಲಿ ಪತ್ತೆಯಾಗಿದೆ.
ಕಣ್ವತೀರ್ಥದ ಬಳಿ ಕರ್ನಾಟಕ ಮೂಲದ ವ್ಯಕ್ತಿಯೋರ್ವರ ಮಾಲಕತ್ವದ ಸುಮಾರು 15 ಎಕರೆಯಷ್ಟು ಸ್ಥಳ ಇರುವ ಶೆಡ್ ನಿಂದ ತಿಮಿಂಗಿಲದ ಅಸ್ಥಿಪಂಜರವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
2007ರಲ್ಲಿ ಕಣ್ವತೀರ್ಥ ಕಡಲ ಕೆನಾರೆಯಲ್ಲಿ ಸಿಕ್ಕಿರುವ ತಿಮಿಂಗಿಲದ ಅಸ್ಥಿಪಂಜರವನ್ನು ದಾಸ್ತಾನು ಮಾಡಲಾಗಿದ್ದು,ಇದಕ್ಕಾಗಿ 27 ಸಾವಿರ ರೂ . ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದಾಗಿದೆ ಎಂದು ಶೆಡ್ನ ಮಾಲೀಕ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.ಇದೀಗ ಅಸ್ಥಿಪಂಜರವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಸ್ಥಿ ಪಂಜರದ ಅವಶೇಷಗಳನ್ನು ಡಿ.ಎನ್.ಎ ಪರೀಕ್ಷೆಗೊಳಪಡಿಸಲಾಗುವುದು ಎಂದು ಅರಣ್ಯ ವಲಯಾಧಿಕಾರಿ ತಿಳಿಸಿದ್ದಾರೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.