ಕುಂದಾಪುರ, ಜು 28 (DaijiworldNews/HR): ಫಾಲ್ಸ್ ನೋಡಲು ಬಂದು ಕಾಲು ಜಾರಿ ಬಿದ್ದು ನಾಪತ್ತೆಯಾಗಿರುವ ಶರತ್ ಎಂಬಾತನನ್ನು ಪತ್ತೆ ಮಾಡುವ ಕಾರ್ಯ ಆರನೇ ದಿನವಾದ ಶುಕ್ರವಾರವೂ ವಿಫಲಗೊಂಡಿದೆ.
ಘಟ್ಟ ಪ್ರದೆಶದಲ್ಲಿ ವಿಪರೀತ ಮಳೆಯಾಗಿದ್ದರಿಂದ ರಭಸದಲ್ಲಿ ತುಂಬಿ ಹರಿಯುತ್ತಿದ್ದ ಸೌಪರ್ಣಿಕಾ ನದಿಗೆ ಬಿದ್ದ ತಕ್ಷಣವೇ ಶರತ್ ನಾಪತ್ತೆಯಾಗಿದ್ದ. ಬಳಿಕ ಪ್ರಸಿದ್ಧ ಮುಳುಗುತಜ್ಞ ಈಶ್ವರ್ ಮಲ್ಪೆ, ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮೊದಲಾದವರೆಲ್ಲ ಶರತ್ ಗಾಗಿ ಹುಡುಕಾಟ ನಡೆಸಿ ಹಿಂತಿರುಗಿದ್ದಾರೆ.
ಗುರುವಾರ ಅಗ್ನಿಶಾಮಕದಳ ಹಾಗೂ ಎನ್.ಡಿಆರ್.ಎಫ್ ತಂಡ ಅರಿಶಿನಗುಂಡಿ ಫಾಲ್ಸ್ ನಲ್ಲಿ ಡ್ರೋಣ್ ಬಳಸಿ ಹುಡುಕಾಟ ನಡೆಸಿದೆ.
ಇನ್ನು ಶುಕ್ರವಾರವೂ ಹುಡುಕಾಟ ಮುಂದುವರೆಸಲಾಗಿದ್ದು ಯಾವುದೇ ಪ್ರಯೋಜನ ಕಂಡುಬಂದಿಲ್ಲ.