ಮಂಗಳೂರು, ಜು 28 (DaijiworldNews/HR): ದ.ಕ ಜಿಲ್ಲೆಯಲ್ಲಿ ಸುರಿಯುತ್ತಿದ್ದ ಭಾರೀ ಮಳೆಗೆ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲ್ಲೈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗೆ ರಜೆ ನೀಡಿದ್ದರು. ಹಾಗಾಗಿ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ವಿದ್ಯಾರ್ಥಿಯೋರ್ವ ಕಚೇರಿಯೊಂದರಲ್ಲಿ ದ.ಕ ಜಿಲ್ಲಾಧಿಕಾರಿಯ ಹಲವು ಫೋಟೋಗಳನ್ನು ಅಂಟಿಸಿ ಕೂತಿದ್ದು, ಆತನ ಬಳಿ ಇನ್ನೋರ್ವ ಬಂದು ಇದು ಯಾರ ಫೋಟೋ ಇಷ್ಟೋಂದು ಅಂಟಿಸಿದ್ದೀಯಾ ಎಂದು ಕೇಳುತ್ತಾನೆ. ಆಗ ಆ ವಿದ್ಯಾರ್ಥಿ ಇದು ನಮ್ಮ ಜಿಲ್ಲಾಧಿಕಾರಿ. ಮಳೆ ಬಂದಾಗ ನಮಗೆ ಶಾಲೆಗೆ ರಜೆ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಫೋಟೋ ತೋರಿಸಿ ವಿವರಿಸುತ್ತಾನೆ.
ಇನ್ನು ಈ ವೇಳೆ ಮತ್ತೋರ್ವ ವಿದ್ಯಾರ್ಥಿ ಬಂದು ಜಿಲ್ಲಾಧಿಕಾರಿಗೆ ಜೈ ಎಂದು ಘೋಷಣೆ ಕೂಗುತ್ತಿರುವುದು ಕಾಣುತ್ತಿದ್ದುಮ್ ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.