ಕಾಸರಗೋಡು, ಜು 27(DaijiworldNews/SM): ಆವರಣ ಇಲ್ಲದ ಬಾವಿಗೆ ಬಿದ್ದು ಪಾಕತಜ್ಞರೋರ್ವರು ಮೃತಪಟ್ಟ ಘಟನೆ ಪೆರ್ಲ ಸಮೀಪದ ಕಾಟುಕುಕ್ಕೆ ಕುಡ್ತಡ್ಕದಲ್ಲಿ ಗುರುವಾರ ಸಂಜೆ ನಡೆದಿದೆ. ಜನಾರ್ಧನ ನಾಯಕ್(42) ಮೃತಪಟ್ಟವರೆಂದು ಗುರುತಿಸಲಾಗಿದೆ.
ಮನೆ ಸಮೀಪದ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿದೆ. ಸಂಜೆ ನೀರು ಸೇದಲು ಹೋಗಿದ್ದ ಸಂದರ್ಭ ದಲ್ಲಿ ಕಾಲು ಜಾರಿ ಆಕಸ್ಮಿಕ ವಾಗಿ ಬಿದ್ದಿರ ಬಹುದೆಂದು ಶಂಕಿಸಲಾಗಿದೆ. ತವರು ಮನೆಗೆ ತೆರಳಿದ್ದ ಪತ್ನಿ ಮತ್ತು ಮಗು ಸಂಜೆ ಮನೆಗೆ ಬಂದಾಗ ಜನಾರ್ಧನ ನಾಪತ್ತೆಯಾಗಿದ್ದು, ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದರು. ಗಮನಿಸಿದಾಗ ಬಾವಿಗೆ ಬಿದ್ದಿರುವುದು ಪತ್ತೆಯಾಗಿದೆ.
ಪರಿಸರವಾಸಿಗಳು ಮತ್ತು ಮುಳುಗು ತಜ್ಞರ ಸಹಾಯ ದಿಂದ ಮೃತ ದೇಹವನ್ನು ಮೇಲಕ್ಕೆ ತ್ತ ಲಾಯಿತು .ಬದಿಯಡ್ಕ ಪೊಲೀಸರು ಮಹಜರು ನಡೆಸಿ ದರು ಮೃತ ದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರ ದಲ್ಲಿರಿಸ ಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಬಂಧಿಕ ರಿಗೆ ಬಿಟ್ಟು ಕೊಡಲಿದೆ.