ಕಾಸರಗೋಡು, ಜು 27(DaijiworldNews/SM): ಪ್ರಚೋದಕಾರಿ ಘೋಷಣೆ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ ಇರಿಸಿದ್ದಾರೆ.ಫೇಸ್ ಬುಕ್ , ವಾಟ್ಸ್ ಅಪ್ , ಟೆಲಿಗ್ರಾಮ್, ಫೇಸ್ ಬುಕ್ ಸೇರಿದಂತೆ ಸಾಮಜಿಕ ಜಾಲ ತಾಣಗಳ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ವೈಭವ್ ಸಕ್ಸೆನಾ ಹೇಳಿದ್ದಾರೆ.
ಪ್ರಚೋದನಕಾರಿ ಸಂದೇಶ , ವರದಿಗಳು ಘೋಷಣೆ ಮೊದಲಾದವುಗಳ ಬಗ್ಗೆ ಗಮನಕ್ಕೆ ಬಂದಲ್ಲಿ ಜಾಮೀನು ರಹಿತ ಮೊಕದ್ದಮೆ ಹೂಡಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲ ತಾಣಗಳ ನಿಗಾಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ. ಎಲ್ಲಾ ಸಾಮಾಜಿಕ ಜಾಲ ತಾಣಗಳ ಬಗ್ಗೆ ನಿಗಾ ಇರಿಸಿದ್ದು , ಸುದ್ದಿ ಹರಡಿಸುವ ಮಾತ್ರವಲ್ಲ ಅಡ್ಮಿನ್ ವಿರುದ್ದವೂ ಕ್ರಮ ತೆಗೆದುಕೊಳ್ಳಲಾಗುವುದು. ಇದುವರೆಗೆ ಎರಡು ಪ್ರಕರಣಗಳ ನ್ನು ದಾಖಲಿಸಲಾಗಿದೆ.
ಘೋಷಣೆ ಕೂಗಿದ ಐವರನ್ನು ಬಂಧಿಸಿ ದ್ದು , ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದವರ ಬಂಧನಕ್ಕಾಗಿ ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಮಣಿಪುರ ಘಟನೆಗೆ ಸಂಬಂಧಪಟ್ಟಂತೆ ಯೂತ್ ಲೀಗ್ ಕಾಞ೦ಗಾಡ್ ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಪ್ರಚೋದನಾ ಕಾರಿ ಘೋಷಣೆ ಕೂಗಿದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ