ಉಡುಪಿ, ಜು 27 (DaijiworldNews/MS): ವಾಶ್ರೂಮ್ನಲ್ಲಿ ಬಾಲಕಿಯರ ವಿಡಿಯೋ ಚಿತ್ರೀಕರಿಸಿದ ಘಟನೆ ವರದಿಯಾದ ಕಾಲೇಜಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಭೇಟಿ ನೀಡಿದ್ದಾರೆ.
ಜುಲೈ 27 ರ ಗುರುವಾರ ಬೆಳಿಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚೀಂದ್ರ ಮತ್ತು ಆಯೋಗದ ಇತರ ಅಧಿಕಾರಿಗಳೊಂದಿಗೆ ಖುಷ್ಬೂ ಅವರು ಘಟನೆಯ ಕುರಿತಾಗಿ ಮಾಹಿತಿ ಪಡೆದುಕೊಳ್ಳಲು ಕಾಲೇಜು ಕ್ಯಾಂಪಸ್ಗೆ ಭೇಟಿ ನೀಡಿದರು. ಅವರು ಕಾಲೇಜು ಆಡಳಿತ ಮಂಡಳಿ, ಸಂತ್ರಸ್ತೆ ಮತ್ತು ಅಪರಾಧಿ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಈ ವೇಳೇ ಕಾಲೇಜಿನ ನಿರ್ದೇಶಕಿ ರಶ್ಮಿ, ಶೈಕ್ಷಣಿಕ ಸಂಯೋಜಕ ಬಾಲಕೃಷ್ಣ, ಪ್ರಾಂಶುಪಾಲ ರಜೀಪ್ ಮೊಂಡಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲೆ ಮೇರಿ ಶ್ರೇಷ್ಠ, ಮತ್ತಿತರರು ಉಪಸ್ಥಿತರಿದ್ದರು.