ಉಡುಪಿ, ಜು 26 (DaijiworldNews/HR): ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವುದು ಇದು ಏಕೈಕ ಘಟನೆ ಅಲ್ಲ, ಏಳೆಂಟು ತಿಂಗಳಿಂದ ನಡೆಯುತ್ತಿದೆ ಎಂಬ ಸಂಶಯ ಇದೆ. ಕಾಲೇಜಿನ ಸಂತ್ರಸ್ಥರ ಬಾಯಿ ಮುಚ್ಚಿಸುವ ಕೆಲಸ ಪೊಲೀಸರಿಂದ ಆಗಿದೆ. ವಿಡಿಯೋ ಚಿತ್ರೀಕರಣ ಸಾಮಾನ್ಯ ಮೊಬೈಲ್ ಅಲ್ಲ, ಒಂದು ಲಕ್ಷ ಮೌಲ್ಯದ ಮೊಬೈಲ್ ಇದೆ. ಅವರಿಗೆ ದುಬಾರಿ ಮೊಬೈಲ್ ಕೊಟ್ಟವರು ಯಾರು? ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಹಿಜಾಬ್ ವಿವಾದಕ್ಕಿಂತ ಇದು ಹೇಯ ಕೃತ್ಯ. ಈ ಬಗ್ಗೆ ಪ್ರಶ್ನಿಸುವವರನ್ನು ಧಮನಿಸಲಾಗಿದೆ. ವಿಡಿಯೋ ಎಲ್ಲೆಲ್ಲಿ ಹರಿದಾಡಿದೆ ಎಂಬುದನ್ನು ತನಿಖೆ ಮಾಡಿ. ಮುಸ್ಲಿಂ ಯುವತಿಯರ ಜೊತೆ ಮುಸ್ಲೀಂ ಯುವಕರು ಒಳಗೊಂಡಿದ್ದಾರೆ. ಇದು ಉಡುಪಿಗೆ ಕಳಂಕ, ಪೊಲೀಸ್ ಇಲಾಖೆಯ ವರ್ತನೆ ಸರಿ ಇಲ್ಲ ಎಂದರು.
ಇನ್ನು ಶುಕ್ರವಾರ ಬಿಜೆಪಿ ಉಡುಪಿ ಜಿಲ್ಲೆ ಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ, ಇದು ಕೇರಳ ಸ್ಟೋರಿ ಮಾದರಿಯ ಘಟನೆ. ವಿಶೇಷ ತಂಡ ರಚನೆ ಮಾಡಿ ತನಿಖೆ ಮಾಡಿ ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖೆ ಬೇಡ, ಎಸ್ಐಟಿ ಮೂಲಕ ತನಿಖೆ ಮಾಡಬಹುದು, ರಾಜ್ಯ ಸರ್ಕಾರ ಮಾಡದಿದ್ದರೆ ಕೇಂದ್ರದ ಗಮನ ಸೆಳೆಯುತ್ತೇವೆ. ಇದು ತಮಾಷೆಗೆ ಆದ ಘಟನೆ ಅಲ್ಲ. ಏಳೆಂಟು ತಿಂಗಳಿಂದ ಈ ರೀತಿ ಆಗ್ತಾ ಇದ್ದು, ಇದು ಗಂಭೀರ ವಿಚಾರ, ವಿದ್ಯಾರ್ಥಿನಿಯರು ಭಯ ಪಡುತ್ತಾರೆ. ಈ ಘಟನೆಯ ಹಿಂದೆ ಯಾವ ಶಕ್ತಿ ಇದೆ ತನಿಖೆ ಬೇಕು ಎಂದಿದ್ದಾರೆ.
ರಾಜ್ಯ ಸರ್ಕಾರ ಪ್ರಕರಣ ಹಳ್ಳಹಿಡಿಸುವ ಪ್ರಯತ್ನಿಸುತ್ತಿದ್ದು, ಬೆಂಗಳೂರು ಭಯೋತ್ಪಾದಕರಿಗೆ ಗೃಹ ಸಚಿವ ರು ಯಾವ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಗೊತ್ತು. ಗೃಹ ಸಚಿವರು ಈ ಪ್ರಕರಣದಲ್ಲಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾರೆ. ಪರಮೇಶ್ವರ್ ಹೇಳುವಷ್ಟು ಸಣ್ಣ ವಿಚಾರ ಇದಲ್ಲ ಎಂದು ಹೇಳಿದ್ದಾರೆ.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯಿಸಿ, ವಾರದ ನಂತರ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ. ವಿದ್ಯಾರ್ಥಿಗಳ ಎಲ್ಲಾ ಮೊಬೈಲ್ ವಶಕ್ಕೆ ಪಡೆದುಕೊಳ್ಳಬೇಕು. ಡಿಲೀಟ್ ಮಾಡಿದ ಫೋಟೋ ವಿಡಿಯೋಗಳನ್ನು ರಿಕವರ್ ಮಾಡಬೇಕು. ಹೈದರಾಬಾದ್ ನಲ್ಲಿ ಇದಕ್ಕೆ ಸಂಬಂಧಪಟ್ಟ ಲ್ಯಾಬ್ ಇದೆ. ಮಹಿಳಾ ಆಯೋಗದ ಸೂಚನೆ ಮೇರೆಗೆ ಸೆಕ್ಷನ್ ಹಾಕಬೇಕು. ರಾಜ್ಯ ಕೇಂದ್ರ ಜಂಟಿಯಾಗಿ ತನಿಖೆ ಮಾಡಬೇಕು ಎಂದರು.
ಇನ್ನು ಕಾಲೇಜಿನ 10 ದಿನದ ಸಿಸಿಟಿವಿ ಫೂಟೇಜ್ ಪಡೆದುಕೊಳ್ಳಬೇಕು. ಸೈಬರ್ ಕ್ರೈಂ ಬಗ್ಗೆ ಕಾಲೇಜಿನಲ್ಲಿ ಪೊಲೀಸರು ಮಾಹಿತಿ ನೀಡಿದ್ದೆ ಯಾಕೆ? ಬಹಳ ಮಾಹಿತಿ ಲಭ್ಯವಾಗುತ್ತಿದೆ - ಮನೆಯಿಂದಲೂ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ಶೆಟ್ಟಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮುಖಂಡರಾದ ಉದಯ್ ಕುಮಾಋ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.