ಕಾಸರಗೋಡು:ಜು 27 (DaijiworldNews/MS): ಮನೆಯಿಂದ ಹೊರಗೆ ಹೋಗಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿ ಮರಕ್ಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಕುತ್ತಿಗೆ ಬಿಗಿದು ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದ್ದರೂ ಯಾಕಾಗಿ ವಿದ್ಯಾರ್ಥಿನಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಕುರಿತು ಕಾರಣ ತಿಳಿದು ಬಂದಿಲ್ಲ.
ಕನ್ಯಪ್ಪಾಡಿ ಮಾಡತ್ತಡ್ಕ ಕೇರ ನಿವಾಸಿ ರಾಮಕೃಷ್ಣ ಅವರ ಪುತ್ರಿ ರಶ್ಮಿತಾ ಕೆ. ಅವರ ಮೃತದೇಹ ಜು. 23ರಂದು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳದಲ್ಲಿ ಬೀಡಿ ಹಾಗೂ ಬೆಂಕಿ ಪಟ್ಟಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅವುಗಳು ಅಲ್ಲಿಗೆ ಹೇಗೆ ಬಂತು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ