ಬೆಂಗಳೂರು, ಜು 21 (DaijiworldNews/SM): ಸದನದಿಂದ 10 ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ಬಹಳ ಖಂಡನೀಯ ಎಂದು ಮಾಜಿ ಶಾಸಕರಾದ ರಘುಪತಿ ಭಟ್ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಅವರು ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರವನ್ನ ನೀಡಿ ಸದನದ ಒಳಗೆ ಶಾಸಕರಿಗೆ ಆದಂತಹ ಹಕ್ಕಿದೆ. ಇದು ಇವಾಗಲ್ಲ ಹಿಂದಿನಿಂದಲು ನಡೆದಿದೆ. ಇದೇ ಕಾಂಗ್ರೆಸ್ ನವರು ಎಪಿಎಂಸಿ ಯ ಬಿಲ್, ಮತಾಂತರ ಖಾಯ್ದೆ, ಇವೆಲ್ಲವನ್ನು ಹರಿದುಹಾಕಿದ್ದಾರೆ. ಮಾತ್ರವಲ್ಲ ಸ್ಪೀಕರ್ ಅವರ ಟೇಬಲ್ ಮೇಲೆ ಹತ್ತಿ ನಿಂತಿರುವ ದೃಶ್ಯಗಳು ನಡೆದಿದೆ. ಇದೇ ಸಿದ್ದರಾಮಯ್ಯನವರು ಸಹ ಟೇಬಲ್ ಮೇಲೆ ಹತ್ತಿರುವುದು, ಅಲ್ಲಿನ ಗೇಟ್ ತುಳಿದಿರುವುದು ಇಂತಹ ಗಲಾಟೆಯನ್ನು ಸಹ ಮಾಡಿದ್ದಾರೆ. ಇದೆಲ್ಲ ಕಾಂಗ್ರೆಸ್ ರವರು. ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಎಂದರು.