ಬೆಂಗಳೂರು, ಜು 20 (DaijiworldNews/SM): ರಾಜಧಾನಿಯಲ್ಲಿ ಭಯೋತ್ಪಾದಕರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಮಂತ್ರಿ ಪರಮೇಶ್ವರ್ ಹೇಳಿಕೆ ಆತಂಕವನ್ನುಂಟು ಮಾಡಿದೆ. ನಾನು ಸರಕಾರಕ್ಕೆ ಕೇಳುತ್ತೇನೆ, ಬಂಧಿಸಲ್ಪಟ್ಟವರೇನು ನಿಮ್ಮ ಮೊಮ್ಮಕ್ಕಳಾ? ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವರು ಬಂಧಿಸಲ್ಪಟ್ಟವರು ಭಯೋತ್ಪಾದಕರೆಂದು ಈಗಲೇ ಹೇಳಲಾಗಲ್ಲ ಅಂತಾರೆ. ಎಲ್ಲಾ ದಾಖಲೆಯಿದೆ, ವಿದೇಶಿ ಭಯೋತ್ಪಾದಕರ ನಂಟಿನ ಬಗ್ಗೆ ಪೊಲೀಸರಿಗೆ ಮಾಹಿತಿಯಿದೆ. ಬೆಂಗಳೂರಲ್ಲಿ ಯಾವಾಗ ಸ್ಫೋಟವಾಗುತ್ತೋ ಎಂದು ಸಾರ್ವಜನಿಕರಲ್ಲಿ ಆತಂಕವಿದೆ. ಆದರೆ, ಈ ಬಗ್ಗೆ ಗೃಹ ಮಂತ್ರಿಗಳ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸರ್ಕಾರ ದಾಕ್ಷಿಣ್ಯ ಬಿಟ್ಟು ಉಗ್ರಗಾಮಿಗಳನ್ನು ಮಟ್ಟ ಹಾಕಲಿ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ.