ಉಪ್ಪಿನಂಗಡಿ,ಏ03(AZM):ಕಳೆದ ಮಾ.25ರಂದು ತಾನೇ ತನ್ನ ಕೈ ಬಾಯಿ ಕಟ್ಟಿ ತನಗೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ ಎಂದು ಪೊಲೀಸರನ್ನು ನಂಬಿಸಿ ಸುಳ್ಳು ದೂರನ್ನು ನೀಡಿದ ಆರೋಪಿಯನ್ನು ಇಂದು ಉಪ್ಪಿನಂಗಡಿ ಪೊಲೀಸ್ ತನಿಖಾ ತಂಡ ಬಂಧಿಸಿದೆ.
ಲಾರಿ ಚಾಲಕ ಆರೋಪಿ ಅಂಬರೀಶ್ ಎಂಬಾತ ಲಾರಿಯಲ್ಲಿದ್ದ 1 ಲಕ್ಷಕ್ಕೂ ಹೆಚ್ಚಿನ ಸೊತ್ತನ್ನು ದೋಚಿ ಪೊಲೀಸರ ಕಣ್ಣಿಗೆ ಮಣ್ಣೆರಚಲು ಇಂತಹ ಒಂದು ನಾಟಕ ಮಾಡಿದ್ದಾನೆ ಎಂದು ಪೊಲೀಸರು ಕಂಡು ಹಿಡಿದಿದ್ದಾರೆ.
ಪ್ರೊಬೆಷನರಿ ಎ ಎಸ್ಪಿ ಪ್ರದೀಪ್ ಗುಂಟಿ, ಸಿ ಐ ಮಂಜುನಾಥ್, ಎಸ್ ಐ ನಂದ ಕುಮಾರ್ , ಪ್ರೊಬೆಷನರಿ ಎಸ್ ಐ ಪವನ್ ನಾಯಕ್ , ಎ ಎಸ್ ಐ ರುಕ್ಮಯ. ಸಿಬ್ಬಂದಿಗಳಾದ ಹರೀಶ್ಚಂದ್ರ .ಇರ್ಷಾದ್. ಜಗದೀಶ್ ಪತ್ತೆ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.