ಕೋಟ, ಜು 20 (DaijiworldNews/MS): ತಾಯಿಯ ಪಿಂಡವನ್ನು ಪ್ರದಾನ ಮಾಡಲು ತೆರಳಿದ್ದ ಪುತ್ರ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಜು.18ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಗಣೇಶ್ ಅಧಿಕಾರಿ(76) ಎಂದು ಗುರುತಿಸಲಾಗಿದೆ. ಇವರು ತನ್ನ ತಾಯಿಯ ಶ್ರಾದ್ದಾ ಕಾರ್ಯಕ್ರಮ ಮುಗಿಸಿ ಸಂಪ್ರದಾಯದ ಂತೆ ಸಂಜೆ ಪಿಂಡ ಬಿಡಲು ಮನೆ ಬಳಿಯ ಕೆರೆಯ್ಗೆ ಹೋಗಿದ್ದು ಅರ್ಧ ಗಂಟೆ ಕಳೆದರೂ ವಾಪಾಸ್ ಬರಲಿಲ್ಲ, ಇದುದರಿಂದ ಅನುಮಾನಗೊಂಡು ಮನೆಮಂದಿ ತೆರಳಿದಾಗ ಮೃತದೇಹ ಕೆರೆಯ ನೀರಿನಲ್ಲಿ ತೇಲುವ ಸ್ಥಿತಿಯಲ್ಲಿ ಕಂಡುಬಂದಿತ್ತು.
ಪಿಂಡ ಬಿಡಲು ಹೋದಾಗ , ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಎಂದು ಎಂದು ಭಾವಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.