ಮಂಗಳೂರು, ಜು 19 (DaijiworldNews/SM): ಆ್ಯಂಟಿ ಕಮ್ಯೂನಲ್ ವಿಂಗ್ ಬಗ್ಗೆ ಆರಂಭದಿಂದಲೂ ಕರಾವಳಿಯಲ್ಲಿ ಅಪಸ್ವರ ಕೇಳಿ ಬಂದಿದೆ. ಇದೀಗ ಸದನದಲ್ಲಿ ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಆಂಟಿ ಕಮ್ಯುನಲ್ ವಿಂಗ್ ಪ್ರಾರಂಭಿಸಿದ್ದೀರಿ. ಆರಂಭಿಸುವುದಾದರೆ ಇಡೀ ರಾಜ್ಯಕ್ಕೆ ಪ್ರಾರಂಭ ಮಾಡಬಹುದಿತ್ತು. ನಮ್ಮ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರಂಭಿಸಿದ್ದೀರಿ. ಪೊಲೀಸರು ರಾತ್ರಿ 2 ಗಂಟೆಗೆ ಆ ಮನೆಗೆ ಹೋಗಿ ಬಾಗಿಲು ತಟ್ಟುತ್ತಿದ್ದಾರೆ. ಅವನು ಇದ್ದಾನೆಯೇ ಎಂದು ಫೊಟೋ ತೆಗೆಯುತ್ತಿದ್ದಾರಂತೆ. ಆ್ಯಂಟಿ ಕಮ್ಯುನಲ್ ವಿಂಗ್ನಿಂದ ಬ್ರ್ಯಾಂಡ್ ಮಂಗಳೂರಿಗೆ ಹೊಡೆತವಾಗಿದೆ ಎಂದು ಶಾಸಕ ಕಾಮತ್ ಉಲ್ಲೇಖಿಸಿದ್ದಾರೆ.
ವಿಂಗ್ನಿಂದಾಗಿ ಮಂಗಳೂರಿಗೆ ಬರಬೇಕಾದ ಉದ್ಯಮಗಳು ಬರುತ್ತಿಲ್ಲ. ಇದು ಜಿಲ್ಲೆಗೆ ಕಾಂಗ್ರೆಸ್ ಸರಕಾರ ನೀಡಿದ ಕೊಡುಗೆ ಎಂದು ಆ್ಯಂಟಿ ಕಮ್ಯುನಲ್ ವಿಂಗ್ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.