ಪುತ್ತೂರು: ಅಕ್ರಮ ಚಟುವಟಿಕೆಗಳ ತಾಣದ ಚಿತ್ರಣ ಬದಲಾಯಿಸಿ ಔಷಧಿಯ ವೃಕ್ಷೋದ್ಯನ ಮಾಡಿದ ಸರ್ವೆ ಅಧಿಕಾರಿಯೊಬ್ಬರ ಕುಟುಂಬ
Tue, Jul 18 2023 09:54:50 PM
ಪುತ್ತೂರು, ಜು 18 (DaijiworldNews/SM): ಒಂದೊಮ್ಮೆ ಅಕ್ರಮ ಚಟುವಟಿಕೆಗಳ ತಾಣವಾಗಿ ಜನರಲ್ಲಿ ಭಯಭೀತಿಯನ್ನು ಹುಟ್ಟಿಸಿದ್ದ ಜಮೀನು ಇಂದು ಸುಂದರ ಪರಿಸರವಾಗಿ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಅಕ್ರಮ ಚಟುವಟಿಕೆಗಳ ಆಗರವಾಗಿದ್ದ ಜಮೀನಿನಲ್ಲಿ ಔಷಧಿಯ ಗುಣವುಳ್ಳ ಕದಂಬ ವೃಕ್ಷ ಗಳನ್ನು ನೆಟ್ಟು ಬೆಳೆಸಿದ್ದು ಸರ್ವೆ ಅಧಿಕಾರಿ.
ಪುತ್ತೂರಿನ ಸಾಮೆತ್ತಡ್ಕದಲ್ಲಿ ಅಕ್ರಮ ಚಟುವಟಿಕೆಗಳ ಆಗರವಾಗಿದ್ದ ಸುಮಾರು 15 ಎಕರೆ ಜಮೀನನ್ನು ಸುಂದರ ಟ್ರೀ ಪಾರ್ಕ್ ಮಾಡಲಾಗಿದ್ದು, 108 ಕದಂಬ ವೃಕ್ಷೋದ್ಯನವನ ಎಂದು ನಾಮಕರಣ ಮಾಡಲಾಗಿದೆ. ಈ ಕಾರ್ಯ ಮಾಡಿರುವುದು ಸರ್ವೆ ಅಧಿಕಾರಿ. ಪ್ರಕೃತಿಯನ್ನು ಸಂರಕ್ಷಿಸಲು ಸರ್ವೆ ಅಧಿಕಾರಿ ಮತ್ತು ಅವರ ಪತ್ನಿ ಸುಮಾರು 15 ಎಕರೆ ಜಮೀನಿನಲ್ಲಿ ಕದಂಬ ಮರಗಳನ್ನು (ಅಂಥೋಸೆಫಾಲಸ್) ನೆಟ್ಟಿದಾರೆ. ಸರ್ವೇ ಅಧಿಕಾರಿ ಪ್ರಮೋದ್ ಕುಮಾರ್ ಕೆ ಮತ್ತು ಡಾ ಚಾಂದಿನಿ ಅವರು ಆವರಣದಲ್ಲಿ ಅಕ್ರಮ ಚಟುವಟಿಕೆಗಳನ್ನು ತಪ್ಪಿಸಲು ಕದಂಬ ವೃಕ್ಷಗಳನ್ನು(ಆಂಥೋಸೆಫಾಲಸ್) ನೆಟ್ಟಿದ್ದಾರೆ.
ಪ್ರಮೋದ್ ದಂಪತಿಯ ಮಕ್ಕಳು ನೆರೆಹೊರೆಯವರ ಸಹಾಯದಿಂದ ನಾಲ್ಕು ವರ್ಷಗಳ ಹಿಂದೆ 108 ಕದಂಬ ಮರದ ಸಸಿಗಳನ್ನು(ಆಂಥೋಸೆಫಾಲಸ್) ನೆಡಲಾಗಿತ್ತು. ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಅವರಿಗೆ ಸೇರಿದ ಜಮೀನಿನಲ್ಲಿ ಸಸಿಗಳನ್ನು ನೆಡಲಾಗಿದ್ದು, ಇದೀಗ ಸುಂದರ ವೃಕ್ಷೋದ್ಯಾನವನವಾಗಿ ಬೆಳೆದು ನಿಂತಿದೆ. ಮರಗಳನ್ನು ನೆಟ್ಟ ಕುಟುಂಬ ಎಲ್ಲಾ 108 ಮರಗಳಿಗೆ 'ದುರ್ಗಾ ಸ್ತೋತ್ರ' ಎಂದು ಹೆಸರಿಸಿದೆ. ಈ ಹಿಂದೆ ಆ ಸ್ಥಳದಲ್ಲಿ ಹಲವಾರು ಯುವಕರು ಮದ್ಯ ಸೇವನೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರ ಪ್ರೇಮಿಗಳಿಗೆ ಆಶ್ರಯ ತಾಣವಾಗಿದೆ.
ಪುತ್ತೂರಿನಲ್ಲಿ, ಹಲವಾರು ಜನರು ಈ ಟ್ರೀ ಪಾರ್ಕ್ಗೆ ಆಗಮಿಸುತ್ತಾರೆ. ಸಸ್ಯಕಾಶಿಯಲ್ಲಿ ನಡೆದಾಡುತ್ತಾರೆ. ಜೀವಾಮೃತವನ್ನು ಸೇವಿಸುತ್ತಾರೆ. ಹಲವಾರು ಪಕ್ಷಿಗಳು ಮತ್ತು ಕೀಟಗಳು ಮಕರಂದವನ್ನು ಸವಿಯುತ್ತವೆ. ಪಕ್ಷಿಗಳ ವರ್ತನೆಯನ್ನು ಅಧ್ಯಯನ ಮಾಡಲು ಶಿಕ್ಷಣ ತಜ್ಞರು ಸಹ ಇಲ್ಲಿಗೆ ಬರುವುದುಂಟು. ಇಲ್ಲಿನ ಟ್ರೀ ಪಾರ್ಕ್ ಪ್ರಕೃತಿಕ ಸಂಪತ್ತಿನ ಉಳಿವಿಗೆ ಸಾಕಾರ ಎನ್ನುವುದು ಸಾರ್ವಜನಿಕರ ಮಾತು.
ಕದಂಬ ಮರಗಳು ಔಷಧೀಯ ಉಪಯೋಗಗಳನ್ನು ಹೊಂದಿವೆ. ಇದನ್ನು ಆಯುರ್ವೇದ ಔಷಧೀಯ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ. ತಜ್ಞರ ಪ್ರಕಾರ ಇದು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುತ್ತದೆ.
1. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಅನೇಕ ಅಧ್ಯಯನಗಳ ಪ್ರಕಾರ ಕದಂಬ ಮರದ ಎಲೆಗಳು, ತೊಗಟೆ ಮತ್ತು ಬೇರುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿ. ಈ ಮರದ ಎಲೆಗಳು ಮೆಥನಾಲಿಕ್ ಸಾರವನ್ನು ಹೊಂದಿವೆ. ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದು ಪ್ರಯೋಜನಕಾರಿಯಾಗಿದೆ.
2. ನೋವು ನಿವಾರಕ ಕದಂಬ ಮರಗಳ ಎಲೆಗಳು ದೇಹದಲ್ಲಿ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರ ಎಲೆಗಳನ್ನು ಬಟ್ಟೆಯಲ್ಲಿ ಸುತ್ತಿ ದೇಹದಲ್ಲಿ ನೋವು ಇರುವ ಪ್ರದೇಶಕ್ಕೆ ಬಿಗಿಯಾಗಿ ಕಟ್ಟಿದರೆ ನೋವು ಕಡಿಮೆ ಮಾಡಬಹುದು. ಅನೇಕ ಅಧ್ಯಯನಗಳ ಪ್ರಕಾರ, ಈ ಮರದ ಎಲೆಗಳು ಮತ್ತು ತೊಗಟೆ ನೋವು ನಿವಾರಕ ಮತ್ತು ಉರಿಯೂತದ ಗುಣಗಳನ್ನು ದೂರ ಮಾಡುವ ಗುಣ ಹೊಂದಿದೆ.
3. ಆ್ಯಂಟಿಮೈಕ್ರೊಬಿಯಲ್ ಅಂಶ ಹೊಂದಿದೆ ಪ್ರಾಚೀನ ಕಾಲದಲ್ಲಿ ಇದನ್ನು ಚರ್ಮ ರೋಗಗಳಿಗೆ ಚಿಕಿತ್ಸೆ ನೀಡಲು ಆಂಟಿಮೈಕ್ರೊಬಿಯಲ್ ತಂತ್ರವಾಗಿ ಬಳಸಲಾಗುತ್ತಿತ್ತು. ಈ ಮರದ ಸಾರವನ್ನು ಬಳಸಿ ಪೇಸ್ಟ್ ತಯಾರಿಸಲಾಗುತ್ತದೆ. ಇದರ ಸಾರವು ಬ್ಯಾಕ್ಟೀರಿಯಾ ವಿರುದ್ಧ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಆಗಿ ಕಾರ್ಯನಿರ್ವಹಿಸುತ್ತದೆ.
4. ಯಕೃತ್ತಿಗೆ ಒಳ್ಳೆಯದು ಕದಂಬ ಮರದಲ್ಲಿ ಕ್ಲೋರೊಜೆನಿಕ್ ಆಮ್ಲವಿದೆ. ಇದು ಒಂದು ರೀತಿಯ ಆಂಟಿಹೆಪಟೊಟಾಕ್ಸಿಕ್ ಆಗಿದೆ. ಅನೇಕ ಅಧ್ಯಯನಗಳ ಪ್ರಕಾರ ಯಕೃತ್ತಿನ ಅಥವಾ ಪಿತ್ತಜನಕಾಂಗದ ಆರೋಗ್ಯವನ್ನು ಸುಧಾರಿಸಲು ಕದಂಬ ಮರದ ಅಂಶವು ಪ್ರಯೋಜನಕಾರಿಯಾಗಿದೆ.
5. ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಕದಂಬ ಮರದ ಬೇರಿನ ರಸವು ಬೊಜ್ಜು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
6. ಕ್ಯಾನ್ಸರ್ನಿಂದ ಮುಕ್ತಿ ಕದಂಬ ಮರವು ಒಂದು ರೀತಿಯ ಆಂಟಿಟ್ಯುಮರ್ ಕ್ರಿಯೆಯನ್ನು ಉತ್ಪಾದಿಸುತ್ತದೆ. ಇದರ ಬಳಕೆಯು ಪ್ರಾಸ್ಟೇಟ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಕೋಶಗಳ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ, ಅಲ್ಲದೇ ಅವುಗಳನ್ನು ಬೆಳೆಯದಂತೆ ತಡೆಯುತ್ತದೆ.