ಮಂಗಳೂರು, ಜು 18 (DaijiworldNews/HR): ಪಣಂಬೂರು-ಬೈಕಂಪಾಡಿ ಪ್ರದೇಶದ ಎಚ್ಪಿ ಪೆಟ್ರೋಲ್ ಪಂಪ್ನ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ತೋಕೂರು ನಿವಾಸಿ ಟೈಟಸ್ ಫೆರಾವೊ (69) ಎಂದು ಗುರುತಿಸಲಾಗಿದೆ.
ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಬಿದ್ದಿದ್ದು, ಈ ಸಂದರ್ಭದಲ್ಲಿ ಸವಾರನೂ ರಸ್ತೆಗೆ ಬಿದ್ದಿದ್ದಾರೆ.
ಟೈಟಸ್ ಅವರು ಸ್ಕೂಟರ್ ಚಲಾಯಿಸಿಕೊಂಡು ಪಣಂಬೂರು ಕಡೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಹೊಂಡ ಇದ್ದ ಕಾರಣ ಸ್ಕೂಟರಿನ ಚಾಲನೆಯನ್ನು ನಿಧಾನ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬಂದ ಸರಕು ತುಂಬಿದ ಲಾರಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ.
ಬಳಿಕ ಸ್ಕೂಟರ್ ಮತ್ತು ಸವಾರ ಟೈಟಸ್ ಅವರನ್ನು ಲಾರಿ ಸುಮಾರು 100 ಅಡಿ ದೂರಕ್ಕೆ ಎಳೆದುಕೊಂಡು ಹೋಗಿದೆ.