ಧರ್ಮಸ್ಥಳ, ಎ03(SS): ವೀಕ್ಷಕರ ಮನ ಗೆದ್ದ ವೀಕೆಂಡ್ ವಿತ್ ರಮೇಶ್ ಸೀಸನ್ 4 ಕಾರ್ಯಕ್ರಮ ಮತ್ತೆ ಆರಂಭವಾಗಲಿದ್ದು, ಈ ಶೋನ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಅನೇಕ ಜನ ಸಾಮಾನ್ಯರನ್ನು ಸಾಧಕರ ಸೀಟಿನ ಮೇಲೆ ಕೂರಿಸಿರುವ ರಮೇಶ್, ಈ ಬಾರಿ ಸಾಧಕರ ಸೀಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಕುಳ್ಳಿರಿಸಿ ಅವರ ಸಾಧನೆಯನ್ನು ಎಲ್ಲೆಡೆ ಪಸರಿಸಲಿದ್ದಾರೆ.
ಇದೀಗ ನಾಲ್ಕನೇ ಸೀಸನ್ ಆರಂಭವಾಗುತ್ತಿದ್ದು, ಪ್ರಸಾರವಾಗುವ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ. ಆದರೆ ಈ ಶೋನ ಮೊದಲ ಅತಿಥಿ, ಸಾಧಕರ ಸೀಟಿನಲ್ಲಿ ಕೂರುತ್ತಿರುವವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಎಂದು ಮೂಲಗಳು ಹೇಳಿದೆ.
ಈಗಾಗಲೇ ಮೂರು ಸೀಸನ್ಗಳು ಪ್ರಸಾರವಾಗಿದ್ದು ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟಿತ್ತು. ಇನ್ನೇನು ಪ್ರಸಾರವಾಗಲಿರುವ ನಾಲ್ಕನೇ ಸೀಸನ್ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದಿನ ಸೀಸನ್ಗಳಲ್ಲಿ ಅನೇಕ ಸಾಧಕರು ತಾವು ನಡೆದು ಬಂದ ಹಾದಿ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ತಮ್ಮ ಸಾಧನೆಯ ಬಗ್ಗೆ ಹೇಳಿಕೊಳ್ಳಲಿದ್ದಾರೆ.