ಪುತ್ತೂರು, ಏ 03(MSP): ದಾಖಲೆಗಳಿಲ್ಲದೆ ದ್ವಿಚಕ್ರ ವಾಹನವೊಂದರಲ್ಲಿ ಸಾಗಟ ಮಾಡುತ್ತಿದ್ದ ರೂ. 2.75 ಲಕ್ಷ ನಗದನ್ನು ಪುತ್ತೂರಿನ ಈಶ್ವರಮಂಗಲ ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಏ.1ರ ರಾತ್ರಿ ನಡೆದಿದೆ.
ತಾಲೂಕಿನ ಗಡಿಪ್ರದೇಶವಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಿಂದ ಬರುತ್ತಿದ್ದ ದ್ವಿಚಕ್ರ ವಾಹನವೊಂದನ್ನು ಸಂಶಯದ ಮೇರೆಗೆ ಅಧಿಕಾರಿಗಳು ನಿಲ್ಲಿಸಿ ತಪಾಸಣೆ ನಡೆಸಿದಾಗ ಸವಾರರು ಹೆಲ್ಮೆಟ್ನೊಳಗೆ 2.75 ಲಕ್ಷ ಹಣವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಸ್ಕೂಟಿ ಸವಾರರಾದ ಯಶವಂತ್ ಮತ್ತು ಮತ್ತೊಬ್ಬನಲ್ಲಿ ಈ ಹಣದ ಕುರಿತಾದ ದಾಖಲೆಗಳು ಕೇಳಿದಾಗ ಅವರಲ್ಲಿ ಸಮರ್ಪಕ ಉತ್ತರ ಹಾಗೂ ದಾಖಲೆಗಳು ನೀಡದ ಕಾರಣ ಹಣವನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಪುತ್ತೂರು ಕ್ಷೇತ್ರದ ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಈಶ್ವರಮಂಗಲ ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದರು.