ಮಂಗಳೂರು, ಜು 13 (DaijiworldNews/AK) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 6,400 ಮಂದಿ ಇನ್ನು ಪಿಂಚಣಿಗೆ ಆಧಾರ್ ಲಿಂಕ್ ಮಾಡದೆ ಬಾಕಿ ಉಳಿದಿದ್ದಾರೆ.
ಕೇಂದ್ರ ಸರಕಾರದ ಸೂಚನೆಯ ಅನುಸಾರ ನೇರ ಹಣ ಸಂದಾಯ ಯೋಜನೆಯನ್ನು ಜಾರಿ ಗೊಳಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆಯಡಿ ಪಿಂಚಣಿ ಪಡೆ ಯುತ್ತಿರುವ ಎಲ್ಲ ಫಲಾನು ಭವಿಗಳು ಆಧಾರ್ ಜೋಡಣೆ ಮಾಡಲು ಕಳೆದ ವರ್ಷ ಸೆ.15ರ ಗಡುವು ನೀಡಲಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ಬಹುತೇಕ ಮಂದಿ ಪಿಂಚಣಿಗೆ ಆಧಾರ್ಲಿಂಕ್ ಮಾಡದೇ ಬಾಕಿ ಉಳಿದಿದ್ದಾರೆ.
ದಕ್ಷಿಣ ಕನ್ನಡದಲ್ಲಿ 1,78,630 ಮಂದಿ ವಿವಿಧ ಪಿಂಚಣಿ ಪಡೆಯುತ್ತಿದ್ದಾರೆ. ಅದರಲ್ಲಿ ಸುಮಾರು 4,600 ಮಂದಿಯ ಎನ್ಪಿಸಿಐ ಮ್ಯಾಪಿಂಗ್ ಬಾಕಿ ಇದೆ. ಮ್ಯಾಪಿಂಗ್ಗೆ ಜೂನ್ ಅಂತ್ಯದ ಗಡುವು ನೀಡಲಾಗಿತ್ತು. ಆದರೆ ಇನ್ನೂ ಹಲವರು ದಾಖಲೆ ನೀಡದ ಕಾರಣ ಅಂತಿಮ ದಿನಾಂಕ ವಿಸ್ತರಣೆ ಆಗಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ 1,48,216 ಮಂದಿ ಪಿಂಚಣಿದಾರರಿದ್ದಾರೆ. ಇವರಲ್ಲಿ 14,155 ಮಂದಿಯ ಎನ್ಪಿಸಿಐ ಮ್ಯಾಪಿಂಗ್ ಬಾಕಿ ಇತ್ತು. ಈ ಪೈಕಿ ಇಲ್ಲಿಯ ವರೆಗೆ 12,350 ಮಂದಿ ಮಾಡಿದ್ದಾರೆ. ಇನ್ನು 1,805 ಮಂದಿ ಮ್ಯಾಪಿಂಗ್ ಬಾಕಿ ಇದೆ ಎನ್ನಲಾಗುತ್ತಿದೆ. ಮ್ಯಾಪಿಂಗ್ಗೆ ಜೂನ್ ಅಂತ್ಯದ ಗಡುವು ನೀಡಲಾಗಿತ್ತು. ಆದರೆ ಇನ್ನೂ ಹಲವರು ದಾಖಲೆ ನೀಡದ ಕಾರಣ ಅಂತಿಮ ದಿನಾಂಕ ವಿಸ್ತರಣೆ ಆಗಿದೆ.
ಕೇಂದ್ರ ಸರಕಾರ ಸಾಮಾಜಿಕ ಭದ್ರತ ಯೋಜನೆ ಯಡಿ ವಿವಿಧ ಪಿಂಚಣಿಗಳನ್ನು ಪಡೆಯುತ್ತಿರುವವರು ಕೂಡಲೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ “ಎನ್ಪಿಸಿಐ ಮ್ಯಾಪಿಂಗ್’ ಮಾಡಬೇಕಿದೆ. ಇಲ್ಲವಾದರೆ ಪಿಂಚಣಿ ಸ್ಥಗಿತವಾಗಬಹುದು.
ಎಲ್ಲ ಪಿಂಚಣಿ ಫಲಾನುಭವಿಗಳನ್ನು ನಿಖರವಾಗಿ ಗುರುತಿಸಲು ಹಾಗೂ ಸರಕಾರದ ಸೌಲಭ್ಯ ಪಡೆಯಲು ಆಧಾರ್ನೊಂದಿಗೆ ಜೋಡಿಸಿ ನೇರ ಹಣ ಸಂದಾಯ ಯೋಜನೆ ಜಾರಿಗಾಗಿ “ಎನ್ಪಿಸಿಐ ಮ್ಯಾಪಿಂಗ್’ ಕಡ್ಡಾಯ. ಈಗಾಗಲೇ ಬಹುತೇಕ ಮಂದಿ ಇದನ್ನು ಮಾಡಿದ್ದಾರೆ. ಆದರೆ ಇನ್ನೂ ಸಾವಿರಾರು ಹೆಚ್ಚು ಮಂದಿಯ ಮ್ಯಾಪಿಂಗ್ ಬಾಕಿ ಇದೆ. ಈ ಪೈಕಿ ಬಹು ಮಂದಿಗೆ ಪಿಂಚಣಿ ಸ್ಥಗಿತವಾಗಿದೆ.