ಉಳ್ಳಾಲ, ಜು 12 (DaijiworldNews/AK) ಬಾಳೆಪುಣಿ ಗ್ರಾಮ ಪಂಚಾಯತ್ಗೆ ವ್ಯಾಪ್ತಿಯ ಪುಣ್ಯಕೋಟಿನಗರದ ಸಮೀಪದ ಶಾಲೆಯ ಆವರಣದ ಬಳಿ ಬಾರ್ ಎಂಡ್ ರೆಸ್ಟೋರೆಂಟ್ ತೆರೆದಿರುವುದನ್ನ ವಿರೋಧಿಸಿ ಪುಣ್ಯಕೋಟಿ ನಗರ ಶಾರದಾ ವಿದ್ಯಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಗ್ರಾಮಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಾಲೆಯ ಪರವಾಗಿ ವಿದ್ಯಾರ್ಥಿಗಳು ಮತ್ತು ಶಾಲಾ ಆಡಳಿತ ಮಂಡಳಿ, ತಕ್ಷಣ ಕ್ರಮಕೈಗೊಳ್ಳುವಂತೆ ಬಾಳೆಪುಣಿ ಗ್ರಾಮಗೆ ಪಂಚಾಯತ್ ಅಧ್ಯಕ್ಷೆ ಝರೀನಾ ಆವರಿಗೆ ಮನವಿಯನ್ನು ಸಲ್ಲಿಸಿದರು.
ಶಾಲೆಯ ಬಳಿ ಬಾರ್ ತೆರೆಯುವದು ಕಾನೂನುಬಾಹಿರ. ಸರಕಾರದ ಮಾರ್ಗದರ್ಶನವನ್ನು ಪಾಲಿಸದೆ ಬಾರ್ ಆಂಡ್ ರೆಸ್ಟೋರೆಂಟ್ ಗೆ ಅನುಮತಿ ನೀಡಲಾಗಿದೆ. ಶಾಲೆಯ ಆವರಣದ 100 ಮೀ ಅಂತರದಲ್ಲಿ ಯಾವುದೇ ಅಮಲು ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ಅದನ್ನು ಕಡೆಗಣಿಸಿ ತರಾತುರಿಯಲ್ಲಿ ಬಾರ್ನ್ನು ತೆರೆಯಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಬಾರ್ ಅಂಡ್ ರಸ್ಟೋರೆಂಟ್ ನ್ನು ಮುಚ್ಚುವರೆಗೂ ಅಮರಣಾಂತ ಸತ್ಯಾಗ್ರಹದಂತಹ ಹೋರಾಟ ನಡೆಸಲು ಶಾಲಾಡಳಿತ ಮಂಡಳಿ ಸಿದ್ಧವಿದೆ ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜಾರಾಮ ಭಟ್ ಹೇಳಿದರು.
ಬಾರ್ ತೆರೆದಿರುವುದರಿಂದ ಶಾಲೆಯ ಚಟುವಟಿಕೆಗಳಿಗೆ, ಶಾಲಾ ವಿದ್ಯಾರ್ಥಿನಿಯರು ಸಂಜೆ ಮನೆಗೆ ತೆರಳುವಾಗ ತೊಂದರೆಯಾಗುತ್ತದೆ. ಹೀಗಾಗಿ ಬಾರ್ ಅಂಡ್ ರೆಸ್ಟೋರೆಂಟ್ಗೆ ಕೊಟ್ಟಿರುವ ಲೈಸೆನ್ಸ್ ರದ್ದುಮಾಡಬೇಕು ಎಂದು ಆಗ್ರಹಿಸಿದರು.
ಶಾಲಾ ವಿದ್ಯಾರ್ಥಿನಿ ರಶ್ಮಿತ ಮಾತನಾಡಿ ಶಾಲೆಯ ಆವರಣದ ಬಳಿ ಬಾರ್ ಸೇರಿದಂತೆ, ಮಾದಕ ವಸ್ತುಗಳ ಮಾರಾಟ ಕಾನೂನು ಪ್ರಕಾರ ನಿಷೇದವಿದ್ದರೂ ಬಾರ್ ಆರಂಭಿಸಲು ಅನುಮತಿ ನೀಡುವ ಮೂಲಕ ಕಾನೂನು ಉಲ್ಲಂಘನೆಯಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.